• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

May 29, 2026
Skodves collaboration for clean water supply

ಶುದ್ಧ ನೀರು ಪೂರೈಕೆಗೆ ಸ್ಕೋಡ್‌ವೆಸ್ ಸಹಯೋಗ

May 29, 2026
BJP camped in Bhatkal Protest!

ಭಟ್ಕಳದಲ್ಲಿ ಬೀಡು ಬಿಟ್ಟ ಬಿಜೆಪಿ: ಪ್ರತಿಭಟನೆ!

  • Home
Saturday, May 30, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಡಿಕೆ ಕದ್ದ ಕಳ್ಳ ಎರಡೇ ದಿನದಲ್ಲಿ ಸಿಕ್ಕಿಬಿದ್ದ!

Achyutkumar by Achyutkumar
November 7, 2025
1.1k
VIEWS
Share on FacebookShare on WhatsappShare on Twitter

ಶಿರಸಿಯ ಭಾಸ್ಕರ ಬೋವಿವಡ್ಡರ್ ಹಾಗೂ ಯಲ್ಲಾಪುರದ ಹರುಷ ಬೋವಿವಡ್ಡರ್ ಸೇರಿ ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿದ್ದು, ಅಲ್ಲಿದ್ದ ಅಡಿಕೆ ಕದ್ದಿದ್ದಾರೆ. ವಿಶ್ವೇಶ್ವರ ಹೆಬ್ಬಾರ್ ಅವರ ದೂರಿಗೆ ಸ್ಪಂದಿಸಿದ ಪೊಲೀಸರು ಆ ಇಬ್ಬರು ಕಳ್ಳರನ್ನು ಹಿಡಿದು ಜೈಲಿಗೆ ಹಾಕಿದ್ದಾರೆ.

ADVERTISEMENT

ನವೆಂಬರ್ 5ರಂದು ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರ ಅಡಿಕೆ ತೋಟಕ್ಕೆ ಕಳ್ಳರು ನುಗ್ಗಿದ್ದರು. ಅಡಿಕೆ ಮರ ಏರಿದ ದುಷ್ಟರು ಅಲ್ಲಿದ್ದ 10 ಕ್ವಿಂಟಾಲ್ ಹಸಿ ಅಡಿಕೆ ದೋಚಿ ಪರಾರಿ ಆಗಿದ್ದರು. ಅಡಿಕೆ ಕಳ್ಳತನದಿಂದ ತಲೆಬಿಸಿಗೆ ಒಳಗಾದ ವಿಶ್ವೇಶ್ವರ ಹೆಬ್ಬಾರ್ ಅವರು ಪೊಲೀಸ್ ದೂರು ನೀಡಿದ್ದರು. `ಸುಮಾರು 40 ಮರ ಬೋಳಿಸಿದ ಕಳ್ಳರನ್ನು ಹುಡುಕಿ ತಮ್ಮ ಅಡಿಕೆ ತಮಗೆ ಮರಳಿಸಿ’ ಎಂದವರು ಪಿಐ ರಮೇಶ ಹಾನಾಪುರ ಅವರ ಬಳಿ ಮನವಿ ಮಾಡಿದ್ದರು.

ADVERTISEMENT

ವಿಶ್ವೇಶ್ವರ ಹೆಬ್ಬಾರ್ ಅವರಿಂದ ಎಲ್ಲಾ ಮಾಹಿತಿಪಡೆದ ಪಿಎಸ್‌ಐ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಮಹಾವೀರ ಕಾಂಬಳೆ ಜಂಟಿಯಾಗಿ ತನಿಖೆ ಶುರು ಮಾಡಿದರು. ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಉಮೇಶ ತುಂಬರಗಿ, ಸುರೇಶ ವಡ್ಡರ, ದೀಪಕ ನಾಯ್ಕ ಹಾಗೂ ಪರಮೇಶ ಕೆ ಅವರು ವಿವಿಧ ಆಯಾಮಗಳಲ್ಲಿ ಹುಡುಕಾಟ ನಡೆಸಿದರು. ಆಗ, ಯಲ್ಲಾಪುರ ಮಂಚಿಕೇರಿ ಬಳಿಯ ಬೆಂಡಿಗೇರಿ ಹರುಷ ಈರಪ್ಪ ಬೋವಿವಡ್ಡರ್ (24) ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಹರುಷ ಬೋವಿವಡ್ಡರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಶಿರಸಿ ಗೌಡಳ್ಳಿ ಬಳಿಯ ಕೋಗುಲಕೋಳಿಯ ಭಾಸ್ಕರ ಕೃಷ್ಣ ಭೋವಿವಡ್ಡರ್ (19) ಅವರ ಜೊತೆ ಸೇರಿ ಅಡಿಕೆ ಕಳ್ಳತನ ಮಾಡಿರುವುದು ಬಹಿರಂಗವಾಯಿತು.

ADVERTISEMENT

ಪೊಲೀಸರನ್ನು ಕಂಡ ಕೂಡಲೇ ಅವರಿಬ್ಬರು ತಮ್ಮ ತಪ್ಪು ಒಪ್ಪಿಕೊಂಡರು. 1 ಲಕ್ಷ ರೂ ಮೌಲ್ಯದ 10 ಕ್ವಿಂಟಾಲ್ ಅಡಿಕೆ ಕಳ್ಳತನ ನಡೆದಿದ್ದರೂ ಅವರ ಬಳಿ 50 ಸಾವಿರ ಮೌಲ್ಯದ 4.54 ಕ್ವಿಂಟಲ್ ಅಡಿಕೆ ಮಾತ್ರ ಸಿಕ್ಕಿತು. ಅಡಿಕೆ ಕಳ್ಳ ಸಿಕ್ಕಿಬಿದ್ದಿರುವ ವಿಷಯವನ್ನು ಪಿಐ ರಮೇಶ ಹಾನಾಪುರ ಅವರು ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ ಎಂ ಹಾಗೂ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರಿಗೆ ತಿಳಿಸಿದರು. ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಕಳ್ಳರನ್ನು ಹುಡುಕಿದ ಪೊಲೀಸರ ಕಾರ್ಯಕ್ಕೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

May 29, 2026
Skodves collaboration for clean water supply

ಶುದ್ಧ ನೀರು ಪೂರೈಕೆಗೆ ಸ್ಕೋಡ್‌ವೆಸ್ ಸಹಯೋಗ

May 29, 2026
BJP camped in Bhatkal Protest!

ಭಟ್ಕಳದಲ್ಲಿ ಬೀಡು ಬಿಟ್ಟ ಬಿಜೆಪಿ: ಪ್ರತಿಭಟನೆ!

May 29, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋