`ವಂದೇ ಮಾತರಂ ಗೀತೆಯೇ ನಮ್ಮ ರಾಷ್ಟ್ರಗೀತೆ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಜನಗಣಮನ ಎಂಬುದು ಬ್ರಿಟಿಷರನ್ನು ಸ್ವಾಗತಿಸಲು ರಚಿಸಿದ ಗೀತೆ’ ಎಂದವರು ಹೇಳಿದ್ದಾರೆ.
ಹೊನ್ನಾವರದಲ್ಲಿ ನಡೆದ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `ನಾವು ಹಾಡುವ ಜನಗಣಮನ ಮೂಲದಲ್ಲಿ ಬ್ರಿಟಿಷರ ಸ್ವಾಗತ ಗೀತೆಯಾಗಿ ಬರೆಯಲ್ಪಟ್ಟಿತ್ತು. ಈ ವಿಷಯ ಅನೇಕರಿಗೆ ಅರಿವಿದೆ’ ಎಂದಿದ್ದಾರೆ. `ವಂದೇ ಮಾತರಂ ಗೀತೆ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ. `R S S ಶತಮಾನೋತ್ಸವದ ಪ್ರಯುಕ್ತ ವಂದೇ ಭಾರತ ಭಾವನೆ ಮತ್ತೆ ಎಲ್ಲೆಡೆ ಪಸರಿಸಬೇಕು’ ಎಂದವರು ಕರೆ ನೀಡಿದರು.
`ಈ ಹಿಂದೆ ಜನಗಣಮನ ಹಾಗೂ ವಂದೇ ಮಾತರಂ ಎರಡೂ ರಾಷ್ಟ್ರಗೀತೆಯಿರಲಿ ಹಿರಿಯರು ಹೇಳಿದರು. ಹೀಗಾಗಿ ಎರಡೂ ಚಾಲ್ತಿಯಲ್ಲಿದೆ. ಈಗ ಮತ್ತೆ ಇತಿಹಾಸ ಕೆದಕುವ ಉದ್ದೇಶವಿಲ್ಲ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಈ ಮಾತು ಸದ್ಯ ರಾಜಕೀಯ ವಲಯದ ಚರ್ಚೆಗೆ ಕಾರಣವಾಗಿದೆ. ಅವರ ವಿಡಿಯೋ ಎಲ್ಲಡೆ ಹರಿದಾಡುತ್ತಿದ್ದು, ಪರ-ವಿರೋಧವಾಗಿ ಜನ ಮಾತು ಶುರು ಮಾಡಿದ್ದಾರೆ.