ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಗೋವಾ ನೋಂದಣಿಯ ಕಾರಿಗೆ `ಕನ್ನಡಿಗರ ರಕ್ಷಣಾ ವೇದಿಕೆ’ ಹೆಸರು ಹಾಕಿಕೊಂಡಿದ್ದ ಕೃಷ್ಣ ಹುಲಸ್ವಾರ್ ಅವರು `ಸಿಂಹ ಘರ್ಜನೆ’ ರಾಜ್ಯಧ್ಯಕ್ಷ ಎಂದು ಹೇಳಿ ಬಾಲಕಿಯೊಬ್ಬರಿಗೆ ಕಾಟ ಕೊಟ್ಟಿದ್ದಾರೆ. ಸಂತ್ರಸ್ತ ಬಾಲಕಿ ರಕ್ಷಣೆಗಾಗಿ ಪಾಲಕರ ಜೊತೆ ಸೇರಿ ಪೊಲೀಸರ ಮೊರೆ ಹೋಗಿದ್ದಾರೆ.
ಹಳಿಯಾಳದ ತತ್ವಣಗಿ ಗ್ರಾಮದ ಕೃಷ್ಣ ಮಾರುತಿ ಹುಲಸ್ವಾರ ಅವರು ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ (ಸಿಂಹ ಘರ್ಜನೆ) ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂಬ ಪದವಿಹೊಂದಿದ್ದಾರೆ. ತಮ್ಮ ಸಾಮಾಜಿಕ ಪುಟಗಳಲ್ಲಿ ಅವರು ಅನೇಕ ಬಗೆಯ ಹೋರಾಟದ ವಿಡಿಯೋಗಳನ್ನು ಹಾಕಿದ್ದಾರೆ. ಈ ಎಲ್ಲದರ ನಡುವೆ ಶಾಲೆಗೆ ಹೋಗುವ ಬಾಲಕಿಯನ್ನು ಅವರು ಹಿಂಬಾಲಿಸಿ, ಹಿಂಸೆ ಕೊಟ್ಟಿದ್ದಾರೆ. ಆ ಬಾಲಕಿಯ ವಿಡಿಯೋ ಮಾಡಿ ಹೆದರಿಸಿದ್ದಾರೆ.
ಬಾಲಕಿ ಸ್ನೇಹಿತರ ಜೊತೆ ಊಟಕ್ಕಾಗಿ ಉದ್ಯಾನವನದ ಕಡೆ ಹೋದಾಗ ಕೃಷ್ಣ ಹುಲಸ್ವಾರ್ ಬೆನ್ನು ಬಿದ್ದಿದ್ದಾರೆ. ಈ ಬಗ್ಗೆ ಬಾಲಕಿಯ ಪಕ್ಕದ ಮನೆಯ ಪ್ರವೀಣ ಭಜಂತ್ರಿ ಅವರು ಫೋನ್ ಮಾಡಿ ವಿಚಾರಿಸಿದಾಗ ಕೃಷ್ಣ ಹುಲಸ್ವಾರ್ ಬೆದರಿಕೆ ಒಡ್ಡಿದ್ದಾರೆ. . ಬಾಲಕಿ ತಂದೆ ಪರಶುರಾಮ ಮೂಲಿಮನಿ ಅವರು ನೀಡಿದ ಪ್ರಕಾರ ಕೃಷ್ಣ ಹುಲಸ್ವಾರ್ ಅವರ ವಿರುದ್ಧ ಹಳಿಯಾಳ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
You cannot copy content of this page