ಕತ್ತಲೆಯ ದಾರಿಯಲ್ಲಿ ಜೋರಾಗಿ ಬರುತ್ತಿದ್ದ ಕಾರಿಗೆ ಅಡ್ಡಲಾಗಿ ಅಧಿಕಾರಿಗಳು ಕೈ ಮಾಡಿದ್ದಾರೆ. ಆ ವೇಳೆ ಆ ಕಾರಿನಲ್ಲಿ ಬೆಲೆ ಬಾಳುವ ಸಾಗವಾನಿ ಮರದ ತುಂಡುಗಳು ಸಿಕ್ಕಿದೆ.
ಹಳಿಯಾಳ – ಯಲ್ಲಾಪುರ ಮುಖ್ಯ ರಸ್ತೆಯಲ್ಲಿ ಕಾರು ಸಿಕ್ಕಿ ಬಿದ್ದಿದೆ. ಸಾಂಬ್ರಾಣಿ ವಲಯದ ಅರಣ್ಯಾಧಿಕಾರಿಗಳು ಈ ಕಾರ್ಯಾಚರಣೆ ಮಾಡಿದ್ದಾರೆ. ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ಅವರಿಗೆ ಸಿಕ್ಕ ಮುನ್ಸೂಚನೆ ಆಧಾರದಲ್ಲಿ ಅವರ ತಂಡದವರು ಟಾಟಾ ಇಂಡಿಕಾ ವಿಸ್ಟಾ ಕಾರನ್ನು ವಶಕ್ಕೆಪಡೆದಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದ ಸಾಗವಾನಿ ನಾಟಾಗಳು ಅಲ್ಲಿ ದೊರೆತಿದೆ.
ಕಾರನ್ನು ನಿಲ್ಲಿಸಿದ ಚಾಲಕ ಕತ್ತಲಿನಲ್ಲಿ ಚಾಣಾಕ್ಷತನದಿಂದ ಪರಾರಿಯಾಗಿದ್ದು, ಅರಣ್ಯ ಅಧಿಕಾರಿಗಳಿಂದ ಆ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ. ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಅರಣ್ಯ ಸಿಬ್ಬಂದಿ ಮರಗಳ್ಳತನ ನಡೆಸಿದವನಿಗಾಗಿ ಶೋಧ ಶುರು ಮಾಡಿದ್ದಾರೆ. ಸದ್ಯ ಕಾರಿನ ಜೊತೆ ಮರದ ತುಂಡುಗಳನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ.