ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಬಾಳಿ ಬದುಕಬೇಕಿದ್ದ ನಿತಿನ್ ಭಟ್ಟ ಅವರು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ್ದಾರೆ. 20ನೇ ವಯಸ್ಸಿನಲ್ಲಿಯೇ ಅವರು ತಾವು ವಾಸವಿದ್ದ ಕೊಠಡಿಯಲ್ಲಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಿತಿನ್ ಭಟ್ಟ ಅವರು ಅಂಕೋಲಾ ತಾಲೂಕಿನ ಕಲ್ಲೇಶ್ವರದ ರಾಘವೇಂದ್ರ ಭಟ್ಟ ಹಾಗೂ ಸ್ಮಿತಾ ಭಟ್ಟ ದಂಪತಿಯ ಪುತ್ರರಾಗಿದ್ದರು. ಬೆಂಗಳೂರಿನಲ್ಲಿ ಅವರು ಇಂಜಿನಿಯರ್ ಓದುತ್ತಿದ್ದರು. ಮೂರನೇ ಸಮಿಸ್ಟರ್ ಅಧ್ಯಯನಕ್ಕಾಗಿ ಶ್ರಮಿಸುತ್ತಿದ್ದ ಅವರು ದಿಢೀರ್ ಆಗಿ ಆತ್ಮಹತ್ಯೆಯ ನಿರ್ಧಾರ ಮಾಡಿದರು. ತಾವು ವಾಸವಿದ್ದ ರೂಮಿನಲ್ಲಿಯೇ ಅವರು ನೇಣಿಗೆ ಶರಣಾದರು.
ಗುರುವಾರ ರಾತ್ರಿ ಈ ದುರಂತ ನಡೆದಿದ್ದು, ನಿತಿನ್ ಭಟ್ಟ ಅವರ ಸಾವಿನ ನಿರ್ಧಾರಕ್ಕೆ ಈವರೆಗೂ ಕಾರಣ ಗೊತ್ತಾಗಿಲ್ಲ. ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ನಿತಿನ್ ಭಟ್ಟ ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ ಬಗ್ಗೆ ಅನೇಕರು ಅಚ್ಚರಿವ್ಯಕ್ತಪಡಿಸಿದ್ದಾರೆ. ಜೊತೆಗೆ ಹಲವರು ಕಂಬನಿ ಮಿಡಿದಿದ್ದಾರೆ. ವಿಷಯ ತಿಳಿದ ಕುಟುಂಬದವರು ಬೆಂಗಳೂರಿಗೆ ದೌಡಾಯಿಸಿದ್ದು, ಅಲ್ಲಿನ ಪೊಲೀಸರು ಸಾವಿನ ತನಿಖೆ ಶುರು ಮಾಡಿದ್ದಾರೆ.
`ಆತ್ಮಹತ್ಯೆ ಅಪರಾಧ’
You cannot copy content of this page