ಉತ್ತರ ಕನ್ನಡ ಜಿಲ್ಲೆಯ ಎರಡು ಸರ್ಕಾರಿ ಕಚೇರಿಗೆ ಬಾಂಬ್ ಬೆದರಿಕೆ ಬಂದಿದೆ. ಕಚೇರಿಯನ್ನು ಸ್ಪೋಟಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದಾರೆ.
ಕಾರವಾರ ಹಾಗೂ ಭಟ್ಕಳದ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಬೆಳಗ್ಗೆ ಇಮೇಲ್ ಬಂದಿದೆ. ಆ ಇಮೇಲ್ ಸಂದೇಶದಲ್ಲಿ ಸರ್ಕಾರಿ ಕಚೇರಿಯನ್ನು ಸ್ಪೋಟಿಸುವ ಬಗ್ಗೆ ವಿವರಿಸಲಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸರ್ಕಾರಿ ಕಚೇರಿಗೆ ಬಿಗಿ ಭದ್ರತೆ ಒದಗಿಸಿದ್ದಾರೆ.
ಬೆಳಗ್ಗೆ 7.20ರ ಅವಧಿಯಲ್ಲಿ ಈ ಸಂದೇಶ ರವಾನೆಯಾಗಿದೆ. ಶೀಘ್ರದಲ್ಲಿಯೇ ಪ್ರಭಲವಾದ ಬಾಂಬ್ ಸ್ಪೋಟಿಸಲಿದೆ ಎಂದು ಇಮೇಲ್ ಮೂಲಕ ತಿಳಿಸಲಾಗಿದೆ. ಬಾಂಬ್ ನಿಷ್ಕಿçÃಯ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಚೇರಿ ಒಳಗೆ ಹಾಗೂ ಹೊರಗೆ ತೀವೃತರವಾದ ಶೋಧನಡೆಸಲಾಗಿದ್ದು, ಎಲ್ಲಿಯೂ ಬಾಂಬ್ ಪತ್ತೆ ಆಗಿಲ್ಲ.
ADVERTISEMENT
ADVERTISEMENT
ಈ ಮೊದಲು ಭಟ್ಕಳ ಪೊಲೀಸ್ ಠಾಣೆಯನ್ನು ಸಹ ಸ್ಪೋಟಿಸುವುದಾಗಿ ಬೆದರಿಕೆ ಬಂದಿತ್ತು. ಬೆದರಿಕೆ ಒಡ್ಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಎರಡು ಕಡೆ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಬಂದಿದ್ದು, ಅದರತನಿಖೆ ನಡೆಯುತ್ತಿದೆ. ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಂದ ಮಾದರಿಯಲ್ಲಿಯೇ ಕಾರವಾರ ತಹಶೀಲ್ದಾರ್ ಕಚೇರಿಗೂ ಇಮೇಲ್ ಬಂದಿದ್ದು, ಮಾನಸಿಕವಾಗಿ ಕುಗ್ಗಿರುವ ವ್ಯಕ್ತಿ ಈ ಕೃತ್ಯ ನಡೆಸಿದ ಅನುಮಾನಗಳಿವೆ.
ಬಾಂಬ್ ಬೆದರಿಕೆಯ ಬಗ್ಗೆ SP ದೀಪನ್ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..