ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತದೆ ಎಂದು ಮೈಂತ್ರಾ ಎಂಬ ಆನ್ಲೆöÊನ್ ಮಳಿಗೆ ಮೊರೆ ಹೋಗಿದ್ದ ಸಚಿನ್ ದುರ್ಗೇಕರ್ ಅವರಿಗೆ ಲಕ್ಷ ರೂ ನಷ್ಟವಾಗಿದೆ. ಬಟ್ಟೆ ಖರೀದಿ ನಂತರ ಅವರ ಖಾಸಗಿ ಮಾಹಿತಿ ಸೋರಿಕೆಯಾಗಿದ್ದು, ಆಫರ್ ಹೆಸರಿನಲ್ಲಿ ವಂಚಕರು ಮೋಸ ಮಾಡಿದ್ದಾರೆ.
ಕಾರವಾರದ ಮುದುಗಾ ಸೀಬರ್ಡ ಕಾಲೋನಿಯ ಸಚಿನ್ ಪ್ರಕಾಶ ದುರ್ಗೇಕರ್ ಅವರು ಗ್ರಾಸೀಂ ಕಂಪನಿಯ ನೌಕರರಾಗಿದ್ದಾರೆ. ಅಕ್ಟೊಬರ್ 25ರಂದು ಅವರು ಮೈಂತ್ರಾ ಎಂಬ ವೆಬ್‌ಸೈಟ್ ಮೂಲಕ ವಿವಿಧ ಬಟ್ಟೆಗಳನ್ನು ಆರ್ಡರ್ ಮಾಡಿದ್ದಾರೆ. ಅಕ್ಟೊಬರ್ 29ರಂದು ಆ ಬಟ್ಟೆಗಳು ಅವರಿಗೆ ತಲುಪಿದೆ. ಅದಾದ ನಂತರ ಸಚಿನ್ ದುರ್ಗೇಕರ್ ಅವರ ಹೆಸರು, ವಿಳಾಸದ ಜೊತೆ ಮೊಬೈಲ್ ನಂ ಸೋರಿಕೆಯಾಗಿದೆ.
ಅಕ್ಟೊಬರ್ 30ರಂದು ಸಚಿನ್ ದುರ್ಗೇಕರ್ ಅವರಿಗೆ ವಾಟ್ಸಪ್ ಮೂಲಕ ಕರೆಯೊಂದು ಬಂದಿದೆ. ಮೈಂತ್ರಾ ಎಂಬ ಹೆಸರಿನಲ್ಲಿ ಫೋನ್ ಬಂದ ಕಾರಣ ಅದನ್ನು ಸಚಿನ್ ದುರ್ಗೇಕರ್ ಅವರು ಸ್ವೀಕರಿಸಿದ್ದಾರೆ. `ಮೈಂತ್ರಾದಲ್ಲಿ ಇನ್ನಷ್ಟು ಆಫರ್ ಇದೆ’ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದು, ಅದನ್ನು ಸಚಿನ್ ದುರ್ಗೇಕರ್ ಅವರು ನಂಬಿದ್ದಾರೆ. ಆ ಆಫರ್ ಪಡೆಯುವುದಕ್ಕಾಗಿ ತಮ್ಮ ಬ್ಯಾಂಕ್ ಖಾತೆ ವಿವರವನ್ನು ಹಂಚಿಕೊoಡಿದ್ದಾರೆ.
ಅಪರಿಚಿತ ನೀಡಿದ ಲಿಂಕ್ ಕ್ಲಿಕ್ಕಿಸಿ ಅಲ್ಲಿ ತಮ್ಮ ಬ್ಯಾಂಕ್ ಖಾತೆ ವಿವರ ಹಂಚಿಕೊoಡ ತರುವಾಯ ಸಚಿನ್ ದುರ್ಗೇಕರ್ ಅವರ ಖಾತೆಯಲ್ಲಿದ್ದ ಹಣ ಕಡಿತವಾಗಿದೆ. ಅವರ ಯೂನಿಯನ್ ಬ್ಯಾಂಕ್ ಖಾತೆಯಲ್ಲಿದ್ದ 97 ಸಾವಿರ ತಕ್ಷಣ ಖಾಲಿಯಾಗಿದೆ. ಜೊತೆಗೆ ಎಚ್ ಡಿ ಎಫ್ ಸಿ ಬ್ಯಾಂಕಿನ ಖಾತೆಯಲ್ಲಿದ್ದ 40 ಸಾವಿರ ರೂ ಕಡಿತವಾಗಿದೆ. 1.37 ಲಕ್ಷ ರೂ ಕಳೆದುಕೊಂಡ ಸಚಿನ್ ದುರ್ಗೇಕರ್ ಅವರು ಪೊಲೀಸರ ಮೊರೆ ಹೋಗಿದ್ದು, ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.