ಕಡಲ ನಗರಿ ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದ ಮೊದಲ ದಿನ ಖ್ಯಾತ ಗಾಯಕ ಶಂಕರ್ ಮಾದವನ್‌ಗಾಯನ ಪ್ರಸ್ತುತಪಡಿಸಿದ್ದಾರೆ. ತಡರಾತ್ರಿಯವರೆಗೂ ಅದ್ಧೂರಿ ರಸ ಮಂಜರಿ ಕಾರ್ಯಕ್ರಮ ನಡೆದಿದ್ದು, ಭಾಗವಹಿಸಿದ ಜನ ಕುಣಿದು ಕುಪ್ಪಳಿಸಿದ್ದಾರೆ.
ರವಿಂದ್ರನಾಥ ಠಾಗೋರ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಸೋಮವಾರ ನಡೆದ ಕರಾವಳಿ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೂ ಪೂರ್ವ ಬಗೆ ಬಗೆಯ ಮನರಂಜನಾ ಕಾರ್ಯಕ್ರಮಗಳು ನಡೆದಿವೆ. ಉದ್ಘಾಟನೆ ನಂತರವೂ ಜನ ನೆಚ್ಚಿನ ಗಾಯನಗಳಿಗಾಗಿ ಕಾದು ಕುಳಿತಿದ್ದು, ಗಾನಸುಧೆಯಲ್ಲಿ ಮೈ ಮರೆತಿದ್ದಾರೆ. ಕಾರವಾರದ ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ನಡೆಯುವ ಕರಾವಳಿ ಉತ್ಸವಕ್ಕೆ ಮಂಗಳವಾರ ರಾತ್ರಿ ಗಾಯಕ ಗುರುಕಿರಣ ಅವರು ಆಗಮಿಸಲಿದ್ದಾರೆ. ಅದಕ್ಕೂ ಮುನ್ನ ಬ್ರಹ್ಮದೇವ್ ಗುಮಟಾ ಪಾಂಗ್ ಕಲಾ ತಂಡ ಸಂಘದಿAದ ಗುಮಟಾ ಪಾಂಗ್ ವಾದ್ಯ ಪ್ರದರ್ಶನ, ಸುನೀಲ್ ಬಾರ್ಕೂರ್ ಕೈಗಾ ಅವರಿಂದ ಸಂಗೀತ ಕಾರ್ಯಕ್ರಮ, ಸುಮಂಗಲಾ ದೇಸಾಯಿ ಮತ್ತು ಸಂಗಡಿಗರರಿoದ ಸುಗಮ ಸಂಗೀತ ಹಾಗೂ ಜಾನಪದ ಗೀತೆ, ಮನೋಜ ಅ ಪಾಲೇಕರ, ಕಲಾ ಭಾರತಿ ಕಲಾ ವೈವಿಧ್ಯ ತಂಡ ಶಿರಸಿ ಅವರಿಂದ ರೂಪಕ ಗೊಂಬೆಯಾಟ ಮಿಮಿಕ್ರಿ, ಸುಜಾತ ಕೆ ಹರಿಕಂತ್ರ ಅವರಿಂದ ಯೋಗ ನೃತ್ಯ ಸ್ವರ ಸಂಗೀತ, ರಸಮಂಜರಿ ತಂಡ ಸಂಗೀತ ರಸಮಂಜರಿ ನಡೆಯಲಿದೆ.
ಸೋಮವಾರ ಸಂಜೆ ನಡೆದ ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಂದ ನಡೆದ ಜಾನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿವೆ. ಸಭೆಗೂ ಮುನ್ನ ಶ್ರೀನಿವಾಸ ಮೊಳಕಾಲ್ಮುರ್ ಅವರಿಂದ ಕೊಂಬು ಕಹಳೆ ಪ್ರದರ್ಶನ, ನಾಗೇಶ ತಂಡದಿoದ ಕೋಳಿ ಕುಣಿತ, ಗೋರವ ಕಲೆ ಪ್ರದರ್ಶನ ಹುಬ್ಬಳ್ಳಿಯ ಶಂಕ್ರಪ್ಪ ಅವರ ತಂಡದಿoದ ಜಗ್ಗಲಿಗೆ ಮೇಳ ಪ್ರದರ್ಶನ, ಚಿತ್ರದುರ್ಗದ ಮಹಾಂತೇಶ ತಂಡದಿoದ ಮುಖವಾಡ ಕುಣಿತ, ರಾಯಚೂರಿನ ಮಹಾಲಕ್ಷ್ಮಿ ತಂಡದವರಿoದ ಸುಗಮ ಸಂಗೀತ, ಶಿರಸಿಯ ಸೀಮಾ ಭಾಗ್ವತ್ ತಂಡದಿoದ ಭರತ ನಾಟ್ಯ ಪ್ರದರ್ಶನ ಕಾಯ್ರಕಮ ನಡೆಯಿತು.
`ಕರಾವಳಿ ಜನರ ಕಲೆ ಮತ್ತು ಸಂಸ್ಕ್ರತಿ ಯನ್ನು ಉಳಿಸಿ ಬೆಳಸಿ ಪ್ರೋತ್ಸಾಹ ನೀಡುವುದರ ಜೊತೆ ರಾಷ್ಟ್ರ ಮಟ್ಟದ ಕಲಾವಿದರನ್ನು ಕರೆಯಿಸಿ ಮನರಂಜನೆ ಆಯೋಜಿಸಲಾಗಿದೆ’ ಎಂದು ಸಭೆ ಉದ್ಘಾಟಿಸಿದ ಸಚಿವ ಮಂಕಾಳು ವೈದ್ಯ ಹೇಳಿದರು. `ಕರಾವಳಿಯ ಜನರು ಉದ್ಯೋಗ ಬಯಸಿ ಹೊರ ರಾಜ್ಯಗಳಿಗೆ ತೆರಲುವುದನ್ನು ತಪ್ಪಿಸಲು ಹಾಗೂ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪಡೆಸಿ ಉದ್ಯೋಗ ಸೃಷ್ಠಿಸಲು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ಜಾರಿ ಮಾಡಲಾಗುತ್ತದೆ’ ಎಂದವರು ಘೋಷಿಸಿದರು. `ನಿಸರ್ಗ ಮತ್ತು ಮೀನುಗಾರರಿಗೆ ಯಾವುದೇ ರೀತಿ ಹಾನಿಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗುತ್ತದೆ’ ಎಂದರು.
ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಮಾತನಾಡಿ `8 ವರ್ಷಗಳ ನಂತರ ಸಪ್ತಾಹ ಮೂಲಕ ಕಾರ್ಯಕ್ರಮ ಅಯೋಜನೆ ಮಾಡಲಾಗುತ್ತಿದೆ. ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜನ ಸಮಾನ್ಯರ ಏಳಿಗೆಗೆ ಶ್ರಮಿಸುತ್ತಿದೆ’ ಎಂದರು. `ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ಥಾರ್ಮ ಸೆಂಟರ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಕಾರವಾರದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮಾಡಲಾಗುತ್ತದೆ’ ಎಂದರು.