ಕರಾವಳಿ ಉತ್ಸವಕ್ಕೆ ಪ್ರವಾಸಿಗರ ಆಕರ್ಷಿಸಲು ಜಿಲ್ಲಾಡಳಿತ ನಾನಾ ಬಗೆಯ ಕಸರತ್ತು ನಡೆಸುತ್ತಿದ್ದು, ಆ ಪ್ರಯತ್ನ ಜಿಲ್ಲೆಯ ಜನರಲ್ಲಿ ಸ್ಪರ್ಧಾತ್ಮಕ ಭಾವನೆ ಹೆಚ್ಚಿಸಿದೆ. ಸದ್ಯ ಪ್ರವಾಸಿ ತಾಣಗಳಲ್ಲಿನ ಕ್ಷಣಗಳನ್ನು ಸೆರೆಹಿಡಿಯುವ ಸ್ಪರ್ಧೆಯನ್ನು ಆಯೋಜಿಸಿದೆ.
ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ `ಕರಾವಳಿ ಉತ್ಸವ-2025ನ್ನು ಅದ್ಧೂರಿಯಾಗಿ ನಡೆಸಲು ಎಲ್ಲಾ ಬಗೆಯ ಸಿದ್ಧತೆ ಜೋರಾಗಿದೆ. ಪ್ರವಾಸಿಗರ ಆಕರ್ಷಣೆ ಹಾಗೂ ಪ್ರಚಾರಕ್ಕಾಗಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ, ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನಪಡೆದವರಿಗೆ 10 ಸಾವಿರ ರೂ, ಎರಡನೇ ಬಹುಮಾನಪಡೆದವರಿಗೆ 7 ಸಾವಿರ ರೂ ಹಾಗೂ 3ನೇ ಬಹುಮಾನಪಡೆದವರಿಗೆ 5 ಸಾವಿರ ರೂ ಸಿಗಲಿದೆ. 2*2ಅಡಿ ಎತ್ತರದ ಫೋಟೋಗೆ ಪ್ರೇಮ್ ಅಳವಡಿಸಿ ಸಲ್ಲಿಸುವಂತೆ ಜಿಲ್ಲಾಡಳಿತ ಕೋರಿದ್ದು, ಆ ಫೋಟೋಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ, ಜಲಪಾತಗಳ, ಕಡಲತೀರಗಳ, ಪಾರಂಪರಿಕ ತಾಣಗಳ, ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯವರಿಗೆ ಮಾತ್ರ ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯೋಮಿತಿ ಇಲ್ಲ. ಸ್ವತಃ ಕ್ಲಿಕ್ಕಿಸಿದ ಚಿತ್ರಗಳನ್ನು ಮಾತ್ರ ಕಳುಹಿಸಬೇಕಾಗಿದ್ದು ಛಾಯಾಚಿತ್ರದ ಜೊತೆ ಹೆಸರು, ವಿಳಾಸ, ಆಧಾರ್ ಪ್ರತಿ, ಬ್ಯಾಂಕ್ ಖಾತೆ ವಿವರದ ಜೊತೆ ಮೊಬೈಲ್ ನಂ ನೀಡುವುದು ಕಡ್ಡಾಯ. ಛಾಯಾಚಿತ್ರ ಸಲ್ಲಿಸಲು ಡಿಸೆಂಬರ್ 19 ಕೊನೆಯ ದಿನ.
ಫೋಟೋ ಕಳುಹಿಸಬೇಕಾದ ವಿಳಾಸ
ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ,
ಆರ್ ಟಿ ಓ ಕಚೇರಿ ಹತ್ತಿರ, ಕಾರವಾರ – 581301
ಮಾಹಿತಿಗಾಗಿ ಫೋನ್ ಮಾಡಬೇಕಾದ ಸಂಖ್ಯೆ: 8618404610 / 9036074715