`ಅರಣ್ಯ ಹಕ್ಕಿನ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು’ ಎಂಬ ನಿಟ್ಟಿನಲ್ಲಿ ನಡೆದ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಅರಣ್ಯವಾಸಿಗಳ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು `ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು’ ಎಂದು ಹೋರಾಟ ನಡೆಸಿದ್ದರು. ಶಾಸಕ ಶಿವರಾಮ ಹೆಬ್ಬಾರ್ ಅವರು ಅತಿಕ್ರಮಣದಾರರ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೇ ಅವರು ಇದಕ್ಕೆ ಲಿಖಿತ ಉತ್ತರವನ್ನು ನೀಡಿದರು. ಆದರೆ, ಆ ಉತ್ತರಕ್ಕೆ ಶಿವರಾಮ ಹೆಬ್ಬಾರ್ ಅವರು ಸಂತ್ರಪ್ತರಾಗಲಿಲ್ಲ. ಹೀಗಾಗಿ ಅಧಿವೇಶನದಲ್ಲಿ ಎದ್ದು ನಿಂತು ಅವರು ಈ ಬಗ್ಗೆ ಪುನರುಚ್ಚರಿಸಿದ್ದು, `ನೀಡಿದ ಉತ್ತರ ಹಾಗೂ ನೈಜ ಸನ್ನಿವೇಶ ವಿಭಿನ್ನವಾಗಿದೆ’ ಎಂದು ಗಮನಸೆಳೆದರು.
ADVERTISEMENT
`2006ರಿಂದ ಈವರೆಗೆ ಲಕ್ಷಾಂತರ ಜನ ಭೂಮಿ ಹಕ್ಕಿಗಾಗಿ ಕಾಯುತ್ತಿದ್ದಾರೆ. ಅಧಿಕಾರಿಗಳು ನೀಡಿದ ಉತ್ತರ ಹಾಗೂ ನಡೆದ ರೀತಿಗೂ ವ್ಯತ್ಯಾಸವಿದೆ’ ಎಂದು ಶಿವರಾಮ ಹೆಬ್ಬಾರ್ ಅವರು ವಿವರಿಸಿದ್ದು, ಅಂಕಿ-ಸoಖ್ಯೆಗಳ ಮಾಹಿತಿ ನೀಡಿದರು. `ಅರಣ್ಯ ಹಕ್ಕಿಗೆ ಸಾಂಪ್ರದಾಯಿಕ ಪದ್ಧತಿ ಸಂಪ್ರದಾಯ, ರಚನೆ, ಪವಿತ್ರ ಸ್ಥಳ ಮತ್ತು ಭೌತಿಕ ಗುಣಲಕ್ಷಣ ಪ್ರಮುಖ ಸಾಕ್ಷಿ ಅವಶ್ಯ’ ಎಂದು ಅರಣ್ಯ ಸಚಿವರು ಲಿಖಿತವಾಗಿ ತಿಳಿಸಿದರು. `ಜಿಲ್ಲಾ ಪಂಚಾಯತಗೆ ಜನಪ್ರತಿನಿಧಿಗಳಿಲ್ಲದ ಸನ್ನಿವೇಶದಲ್ಲಿ ಕಾನೂನುಬಾಹಿರವಾಗಿ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದಾರೆ’ ಎಂದು ಶಿವರಾಮ ಹೆಬ್ಬಾರ್ ಅವರು ವಿವರಿಸಿದರು. `ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಿ’ ಎಂದು ಶಿವರಾಮ ಹೆಬ್ಬಾರ್ ಅವರು ಮನವಿ ಮಾಡಿದರು.
ADVERTISEMENT
`ಗ್ರಾಮ ಸಭೆಯಿಂದ ರಚಿಸಲ್ಪಟ್ಟ ಅರಣ್ಯ ಕ್ಲೇಮುಗಳನ್ನು ಕ್ಷೇತ್ರಕ್ಕೆ ಭೇಟಿ ನೀಡಿ ಕ್ಲೇಮುಗಳ ಸ್ವರೂಪ, ವ್ಯಾಪ್ತಿ ಮತ್ತು ಪುರಾವೆಗಳನ್ನು ಭೌತಿಕವಾಗಿ ಪರಿಶೀಲಿಸಿ ಗ್ರಾಮ ಸಭೆಯ ನಿರ್ಣಯವನ್ನು ಅಂಗೀಕರಿಸತಕ್ಕದ್ದು ಎಂಬ ಅಂಶವನ್ನು ಉತ್ತರದಲ್ಲಿ ಪ್ರಸ್ಥಾಪಿಸಿ ಸಾಗುವಳಿ ಕ್ಷೇತ್ರದ ಹಕ್ಕಿಗೆ ಭೌತಿಕ ಆಧಾರವು ಮಹತ್ವ ಎಂಬುದನ್ನು ಉತ್ತರದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಜನ ವಸತಿ ಪುರಾವೆಗೆ ಸಂಭAಧಿಸಿದ ಪುರಾತನ ಕಾಲದ ಬಾವಿಗಳು, ಸಮಾದಿ ಸ್ಥಳಗಳು, ಪವಿತ್ರ ಸ್ಥಳಗಳಂತಹ ಪ್ರಾಚೀನತೆಯನ್ನು ಸ್ಥಾಪಿಸುವ ಸಾಂಪ್ರದಾಯಿಕ ರಚನೆಗಳು, ಮನೆ, ಗುಡಿಸಲುಗಳು ಮತ್ತು ಭೂಮಿಗೆ ಮಾಡಿದ ಶಾಶ್ವತ ಸುಧಾರಣೆಗಳು ಸೇರಿದಂತೆ ನೆಲಸಮಗೊಳಿಸುವಿಕೆ, ಕಟ್ಟೆಗಳು ಚೆಕ್ ಡ್ಯಾಮ್‌ಗಳು ಮತ್ತು ಮುಂತಾದವುಗಳAತಹ ಭೌತಿಕ ಗುಣಲಕ್ಷಣಗಳನ್ನು ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಾಕ್ಷಗಳನ್ನಾಗಿ ಪರಿಗಣಿಸಬೇಕು’ ಎಂದಿರುವದನ್ನು ಪ್ರಸ್ತಾಪಿಸಲಾಗಿದೆ. ಶಿವರಾಮ ಹೆಬ್ಬಾರ್ ಸದನದಲ್ಲಿ ಮಾತನಾಡಿದ್ದೇನು? ವಿಡಿಯೋ ಇಲ್ಲಿ ನೋಡಿ..