ಕಾರವಾರದಲ್ಲಿ ಸಿಲೆಂಡರ್ ಸ್ಪೋಟವಾಗಿದೆ. ಸ್ಪೋಟದ ತೀವೃತೆಗೆ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ.
ಶುಕ್ರವಾರ ರಾತ್ರಿ ಈ ಸ್ಪೋಟ ಸಂಭವಿಸಿದೆ. ಕಾರವಾರದ ಬ್ರಹ್ಮಕಟ್ಟಾ ಬಳಿಯ ವಾಳ್ಳೇವಾಡದಲ್ಲಿ ಅವಘಡ ಉಂಟಾಗಿದೆ. ಇಲ್ಲಿನ ಲತಾ ದಯಾನಂದ ನಾಯ್ಕ ಅವರ ಮನೆಯಲ್ಲಿ ಸಿಲೆಂಡರ್ ಸ್ಪೋಟಿಸಿದೆ. ಸಿಲೆಂಡರ್ ಮೇಲಿದ್ದ ಸೇಪ್ಟಿ ವಾಲ್ ತೆರೆದು ಆಕಾಶದ ಕಡೆ ಹಾರಿದೆ. ಪರಿಣಾಮ ಗ್ಯಾಸ್ ಸೋರಿಕೆಯಾಗಿದೆ.
ಈ ವೇಳೆ ಬೆಂಕಿಯೂ ಹತ್ತಿಕೊಂಡಿದ್ದು, ಲತಾ ನಾಯ್ಕ ಅವರ ಮನೆಯ ಮೇಲ್ಚಾವಣಿ ಕಿತ್ತು ಹೋಗಿದೆ. ಅವರ ಹಂಚಿನ ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಸಿಲೆಂಡರ್ ಸ್ಪೋಟದ ವೇಳೆ ಭಾರೀ ಪ್ರಮಾಣದ ಸದ್ದು ಕೇಳಿಸಿದೆ. ಇದರಿಂದ ಅಕ್ಕ-ಪಕ್ಕದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಸ್ಪೋಟದ ವೇಳೆ ಮನೆಯಲ್ಲಿ ವೃದ್ಧೆಯೊಬ್ಬರಿದ್ದು, ಅವರು ಮನೆಯಿಂದ ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಅಗ್ನಿಶಾಮಕ ಅಧಿಕಾರಿಗಳ ಮಾಹಿತಿ ಪ್ರಕಾರ, ವಿದ್ಯುತ್ ಶಾರ್ಟ ಸರ್ಕೀಟಿನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೇ ಬೆಂಕಿ ಸಿಲೆಂಡರ್ ಬಳಿ ತಲುಪಿದೆ. ಈ ವೇಳೆ ಸಿಲೆಂಡರ್ ಸೇಪ್ಟಿವಾಲ್’ಗೆ ಬೆಂಕಿ ಆಗಿ ಸೇಪ್ಟಿ ವಾಲ್ ಹಾರಿದೆ. ಆಗ ಸಿಲೆಂಡರ್ ಒಳಗಿದ್ದ ಗ್ಯಾಸ್ ಸೋರಿಕೆ ಆಗಿದೆ.