ವಿದ್ಯುತ್ ತಂತಿ ಮಾರ್ಗ ದುರಸ್ಥಿ ಹಿನ್ನಲೆ ಕಾರವಾರ, ಕುಮಟಾ ಹಾಗೂ ಹೊನ್ನಾವರದಲ್ಲಿ ಒಂದೇ ದಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಹೆಸ್ಕಾಂ ನಿರ್ಧರಿಸಿದೆ.
ಕುಮಟಾ ಉಪವಿಭಾಗದ ಮುರೂರ 11 ಕೆ.ವಿ ಮಾರ್ಗದ ಕೇಬಲ್ ಬಿಚ್ಚಿ ಅಳವಡಿಸುವ ಕಾಮಗಾರಿ ಹಿನ್ನಲೆ ಡಿಸೆಂಬರ್ 17ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಕುಮಟಾ ನಗರ ಶಾಖೆಯ 11 ಕೆವಿ ಇಂಡಸ್ಟಿಯಲ್ ಮಾರ್ಗ ಮತ್ತು 11 ಕೆವಿ ವಾಲ್ಗಳ್ಳಿ ಮಾರ್ಗದ ಎಲ್ಲಾ ಭಾಗಗಳಲ್ಲಿ ಆ ದಿನ ವಿದ್ಯುತ್ ಕಡಿತ ಆಗಲಿದೆ. ಕುಮಟಾ ಉಪವಿಭಾಗದ 33 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿಯೂ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಗೋಕರ್ಣ, ಬಂಕಿಕೊಡ್ಲ, ಓಂ ಬೀಚ್, ಬಿಜ್ಜೂರು, ಮಾದನಗೇರಿ, ಗಂಗಾವಳಿ, ತದಡಿಯ ಎಲ್ಲಾ ಭಾಗಗಳಲ್ಲಿ ಬೆಳಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.
ಕಾರವಾರ ಉಪವಿಭಾಗದ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಿನ್ನಲೆ ನಂದನಗದ್ದಾ ಮತ್ತು ಸುಂಕೇರಿ ಫೀಡರಿನ ವಿವಿಧ ಪ್ರದೇಶಗಳಲ್ಲಿ ಡಿ 17ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇದೇ ದಿನ ಹೊನ್ನಾವರ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ 10ಎಮ್‌ವಿಎ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣಾ ಕೆಲಸವೂ ನಡೆಯಲಿದೆ. ಹೀಗಾಗಿ ಹೊನ್ನಾವರ ತಾಲೂಕಿನ ಪಟ್ಟಣ ಶಾಖೆಯ ಬಂದರು ರೋಡ್, ಕೆ ಹೆಚ್ ಬಿ ಕಾಲೋನಿ, ಎಲ್ ಐ ಸಿ ಮತ್ತು ಕರ್ಕಿ ಫೀಡರ್‌ಗಳ ವ್ಯಾಪ್ತಿಯಲ್ಲಿ ಡಿ 17ರಂದು ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.