ವಿಘ್ನೇಶ್ವರ ಹೆಗಡೆ ಅವರ ತೋಟದಲ್ಲಿದ್ದ ಅಡಿಕೆಯನ್ನು ಮಹೇಶ ಹೆಗಡೆ ಅವರು ಕದ್ದಿದ್ದಾರೆ. ಕದ್ದ ಅಡಿಕೆ ಮರಳಿಸುವಂತೆ ಕೇಳಿದರೂ ಅವರು ಕೊಟ್ಟಿಲ್ಲ.
ಯಲ್ಲಾಪುರದ ಹಿತ್ಲಳ್ಳಿ ಹೀರೆಸರದಲ್ಲಿ ವಿಘ್ನೇಶ್ವರ ಗಣಪತಿ ಹೆಗಡೆ ಅವರು ವಾಸವಾಗಿದ್ದಾರೆ. ಕೃಷಿ ಕೆಲಸ ಮಾಡಿಕೊಂಡಿರುವ ಅವರು ತಮ್ಮ ತೋಟದಲ್ಲಿ ಅಡಿಕೆ ಬೆಳೆದಿದ್ದಾರೆ. ಅವರ ಅಡಿಕೆ ತೋಟದಲ್ಲಿದ್ದ 700 ಅಡಿಕೆ ಕೊನೆಗಳು ಕಾಣೆಯಾಗಿದೆ.
ಅಲ್ಲಿದ್ದ 47 ಕ್ವಿಂಟಲ್ ಹಸಿ ಅಡಿಕೆಯನ್ನು ವಿಘ್ನೇಶ್ವರ ಹೆಗಡೆ ಅವರ ಚಿಕ್ಕಪ್ಪನ ಮಗ ಮಹೇಶ ಸುಬ್ರಾಯ ಹೆಗಡೆ ಅವರು ಕದ್ದಿದ್ದಾರೆ. ಹಿತ್ಲಳ್ಳಿ ಗ್ರಾಮದ ಬಾಳಗಿಮನೆಯಲ್ಲಿ ಮಹೇಶ ಹೆಗಡೆ ಅವರು ವಾಸವಾಗಿದ್ದು, ಆ ನಂತರ ಮಹೇಶ ಹೆಗಡೆ ಅವರೇ ಅಡಿಕೆ ಕದ್ದಿರುವುದು ಗೊತ್ತಾಗಿದೆ. ಇದರಿಂದ ವಿಘ್ನೇಶ್ವರ ಹೆಗಡೆ ಅವರಿಗೆ 3 ಲಕ್ಷ ರೂ ನಷ್ಟವಾಗಿದೆ. ನವೆಂಬರ್ 14ರಂದು ಅವರ ತೋಟದಲ್ಲಿ ಅಡಿಕೆಯಿದ್ದು, ನವೆಂಬರ್ 20ರಂದು ಅದು ಕಳ್ಳತನವಾಗಿದೆ.
ಅಡಿಕೆ ಕದ್ದ ಚಿಕ್ಕಪ್ಪನ ಮಗ ಮಹೇಶ ಹೆಗಡೆ ವಿರುದ್ಧ ವಿಘ್ನೇಶ್ವರ ಹೆಗಡೆ ಅವರು ಸಿಡಿಮಿಡಿಗೊಂಡಿದ್ದಾರೆ. `ಆ ಅಡಿಕೆಯನ್ನು ತನಗೆ ಮರಳಿಸಿಕೊಡಬೇಕು’ ಎಂದು ಅವರು ಪೊಲೀಸ್ ದೂರು ನೀಡಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.