ಹೊಸ ವರ್ಷದ ಹಿನ್ನಲೆ ಸಮುದ್ರ ತೀರಗಳಲ್ಲಿ ಮೋಜು-ಮಸ್ತಿ ಮಾಡುವುದಕ್ಕೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಡಿವಾಣ ಹಾಕಿದ್ದಾರೆ. ರಾತ್ರಿ 12.30ರ ನಂತರ ಸಂಭ್ರಮಾಚರಣೆ ನಡೆಸದಂತೆಯೂ ಅವರು ಸೂಚಿಸಿದ್ದಾರೆ.
`ಡಿಸೆಂಬರ್ 31ರಂದು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷಿತ ರೀತಿಯಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಬೇಕು’ ಎಂದವರು ಹೇಳಿದ್ದಾರೆ. ಡಿಸೆಂಬರ್ 31ರ ಸಂಜೆ 6 ಗಂಟೆ ನಂತರ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರವಹಿಸಿದ್ದು, ಸಮುದ್ರ ಸ್ನಾನ ಮಾಡುತ್ತಿರುವವರಿಗೆ ತಿಳುವಳಿಕೆ ನೀಡಲಾಗುತ್ತಿದೆ.
ಈ ಬಾರಿಯ ಹೊಸ ವರ್ಷಕ್ಕೆ ಕಡಲತೀರದಲ್ಲಿ ಸಭೆ-ಸಮಾರಂಭ ನಡೆಸಲು ಸಹ ಅವಕಾಶ ಇಲ್ಲ. ಎಂದಿನAತೆ, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೂ ಕಾನೂನು ಕ್ರಮ ಜರುಗಿಸಲಾಗುತ್ತದೆ. ರಾತ್ರಿ 12.30ರ ನಂತರ ಕಡಲತೀರಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಜೊತೆಗೆ ವಿವಿಧ ಹೊಟೇಲ್, ರೆಸಾರ್ಟ ಹಾಗೂ ಹೋಂ ಸ್ಟೇಗಳಲ್ಲಿ ಸಹ ರಾತ್ರಿ 12.30ರ ನಂತರ ಯಾವುದೇ ಚಟುವಟಿಕೆ ನಡೆಸದಂತೆ ಡೀಸಿ ಸೂಚಿಸಿದ್ದಾರೆ.