ಬನವಾಸಿಯ ಮಧುಕೇಶ್ವರ ದೇವರಿಗೆ ಮೀಸಲಿರಿಸಿದ್ದ ನಂದಿ (ಹೋರಿ) ಸಾವನಪ್ಪಿದೆ.
ADVERTISEMENT
ಹಲವು ವರ್ಷಗಳಿಂದ ಈ ಹೋರಿ ಗ್ರಾಮಕ್ಕೆ ಮೆರಗು ನೀಡಿತ್ತು. ಗ್ರಾಮದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ನಂದಿಯೇ ಪ್ರಮುಖ ಆಕರ್ಷಣೆಯಾಗಿತ್ತು. ದೀಪಾವಳಿ, ಯುಗಾದಿ, ಭಸವ ಜಯಂತಿ ಸೇರಿ ಅನೇಕ ಸನ್ನಿವೇಶಗಳಲ್ಲಿ ಜನ ನಂದಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು.
ADVERTISEMENT
ಪ್ರತಿ ಹಬ್ಬದಲ್ಲಿಯೂ ನಂದಿಗೆ ಅಲಂಕಾರ ಮಾಡಿ ಮೆರವಣಿಗೆ ಮಾಡುತ್ತಿದ್ದರು. `ಮಧುಕೇಶ್ವರನ ಹೋರಿ’ ಎಂದೇ ನಂದಿ ಖ್ಯಾತಿಗಳಿಸಿತ್ತು. ಈ ನಡುವೆ ಅನಾರೋಗ್ಯದ ಕಾರಣ ಬಳಲಿದ್ದ ನಂದಿ ಸಾವನಪ್ಪಿತು. ಭಕ್ತಿಯಿಂದ ಪೂಜಿಸುತ್ತಿದ್ದ ನಂದಿ ಸಾವನಪ್ಪಿದ ಕಾರಣ ಜನ ಶೋಕವ್ಯಕ್ತಪಡಿಸಿದರು. ಪುಷ್ಪ ಅಲಂಕೃತ ವಾಹನದಲ್ಲಿ ನಂದಿಯ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಮಾಡಿದರು.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ವಿವಿಧ ವಾದ್ಯ-ಮೇಳಗಳ ಜೊತೆ ನಂದಿಯ ಅಂತಿಮ ಮೆರವಣಿಗೆ ನಡೆಯಿತು. ಬನವಾಸಿಯ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿದ್ದು, ಧಾರ್ಮಿಕ ವಿಧಿಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಯಿತು.