ಕಾರವಾರದ ವ್ಯಾಪಾರಿ ರಮೇಶ್ ಇಂಗಳಕಿ ಅವರನ್ನು ಹರಿಹರದ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿ ದಂಡೆ ಮೇಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠವೂ ತಮ್ಮ ತಾಲೂಕು ಪ್ರತಿನಿಧಿಯಾಗಿ ನೇಮಿಸಿದೆ.
ರಮೇಶ್ ತಿರಕಪ್ಪ ಇಂಗಳಕಿ ಅವರು ಕಾರವಾರದಲ್ಲಿ ತಮ್ಮದೇ ಆದ ವ್ಯಾಪಾರಹೊಂದಿದ್ದು, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ವಾಲ್ಮೀಕಿ ನಾಯಕ ಜನಾಂಗದ ಮುಖಂಡರಾಗಿರುವ ಅವರು ಆರೋಗ್ಯ, ಶೈಕ್ಷಣಿಕ ಸೇವೆಯಲ್ಲಿ ತೊಡಗಿದ್ದಾರೆ. ಧಾರ್ಮಿಕ ಹಿನ್ನಲೆ, ಸಂಘಟನೆ ವಿಷಯದಲ್ಲಿಯೂ ರಮೇಶ ಇಂಗಳಕಿ ಅವರು ಮುಂಚೂಣಿಯಲ್ಲಿದ್ದು ಜನ ಸಂಪರ್ಕದಲ್ಲಿರುವ ವ್ಯಕ್ತಿಯಾಗಿದ್ದಾರೆ.
ಕೋವಿಡ್ ಸನ್ನಿವೇಶದಲ್ಲಿ ರಮೇಶ ಇಂಗಳಗಿ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಕಾರ್ಮಿಕರೊಬ್ಬರು ಅಸ್ವಸ್ಥರಾದಾಗ ಅವರನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಸೇವೆ ಒದಗಿಸಿದ್ದಾರೆ. ರಮೇಶ ಇಂಗಳಗಿ ಅವರು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆ ವಾಲ್ಮೀಕಿ ಜನಾಂಗದ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಅವರ ಕಾರ್ಯ ಹಾಗೂ ಸಾಮಾಜಿಕ ಜೀವನ ಗಮನಿಸಿದ ಶ್ರೀಗಳು ರಮೇಶ್ ಇಂಗಳಕಿ ಅವರನ್ನು ಮಠದ ಪ್ರತಿನಿಧಿಯಾಗಿ ನೇಮಿಸಿದೆ. ಮಠದ ಚಟುವಟಿಕೆಗಳ ಬಗ್ಗೆ ಸಮುದಾಯದವರಿಗೆ ತಿಳಿಸುವುದರ ಜೊತೆ ಜನರ ಭಾವನೆಗಳನ್ನು ಮಠಕ್ಕೆ ಮುಟ್ಟಿಸುವ ಮಹತ್ವದ ಜವಾಬ್ದಾರಿಯನ್ನು ಮಠದ ಪ್ರಸನ್ನಾನಂದ ಸ್ವಮೀಜಿ ಅವರು ರಮೇಶ ಇಂಗಳಗಿ ಅವರಿಗೆವಹಿಸಿದ್ದಾರೆ.
`ಮಹರ್ಷಿ ವಾಲ್ಮೀಕಿ ಗುರುಪೀಠದ ಜವಾಬ್ದಾರಿವಹಿಸಿಕೊಂಡಿರುವ ರಮೇಶ ಇಂಗಳಕಿ ಅವರಿಗೆ ಕ ರಾ ಪ ಪಂಗಡ ನೌಕರರ ಜಿಲ್ಲಾಧ್ಯಕ್ಷ ಗಣೇಶ ಬಿಷ್ಟಣ್ಣನವರ ಶುಭ ಕೋರಿದ್ದಾರೆ. ಪ ಪಂಗಡ ಹಿತರಕ್ಷಣಾ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ತಳವಾರ ಅವರು ಸಹ ರಮೇಶ ಇಂಗಳಕಿ ಅವರನ್ನು ಅಭಿನಂದಿಸಿದ್ದಾರೆ.