ರೆಸಾರ್ಟವೊಂದರಲ್ಲಿ ಅಂದರ್ ಬಾಹರ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ಪ್ರಕರಣವನ್ನು ಸರ್ಕಾರ ಸುಪ್ರೀಂ ಕೋರ್ಟವರೆಗೆ ಕೊಂಡೊಯ್ದಿದೆ. ವಾದ ಆಲಿಸಿದ ಸುಪ್ರೀಂ ಕೋರ್ಟ `ಅಂದರ್ ಬಾಹರ್ ಆಡುವುದು ಅಪರಾಧ ಅಲ್ಲ’ ಎಂದು ಆದೇಶಿಸಿದೆ!
ಶಿರಸಿಯ ಭೈರುಂಬೆ ಬಳಿ ಹಾವೇರಿಯ ವೈದ್ಯ ಡಾ ಬಸವರಾಜ ವೀರಪುರು ಅವರು ವಿಆರ್‌ಆರ್ ಎಂಬ ರೆಸಾರ್ಟ ಹೊಂದಿದ್ದರು. ಆ ರೆಸಾರ್ಟಿನಲ್ಲಿ ಅಂದರ್ ಬಾಹರ್ ಆಡುವಾಗ 20 ಜನ ಸಿಕ್ಕಿ ಬಿದ್ದಿದ್ದರು. 49 ಲಕ್ಷ ರೂ ಹಣವನ್ನು ಪೊಲೀಸರು ಜಪ್ತು ಮಾಡಿದ್ದರು. ನಂತರ ವೈದ್ಯರನ್ನು ಸೇರಿಸಿ ಸಿಕ್ಕಿಬಿದ್ದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಿಕ್ಕಿ ಬಿದ್ದವರೆಲ್ಲರೂ ಕಾನೂನು ಹೋರಾಟ ನಡೆಸಿದ್ದು, ತಮ್ಮ ಮೇಲೆ ದಾಖಲಾದ ಪ್ರಕರಣದ ಬಗ್ಗೆ ಹೈಕೋರ್ಟಿನ ಮೊರೆ ಹೋಗಿದ್ದರು.
ಶಿರಸಿ ಮೂಲದ ವಕೀಲ ಸೌರಭ ಹೆಗಡೆ ಹೂಡ್ಲಮನೆ ಅವರು ಈ ಪ್ರಕರಣವನ್ನು ಧಾರವಾಡದ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಆ ವೇಳೆ ಹೈಕೋರ್ಟ `ಅಂದರ್ ಬಾಹರ್ ಕೌಶಲ್ಯದ ಆಟ’ ಎಂದು ಹೇಳಿತ್ತು. ಅನೇಕ ಪ್ರಕರಣಗಳಲ್ಲಿ ಹೈಕೋರ್ಟ ಅದೇ ಮಾತನ್ನು ಪುನರುಚ್ಚರಿಸಿತ್ತು. ಅದಾಗಿಯೂ, ಸರ್ಕಾರ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಿತ್ತು. ಸದ್ಯ ಸುಪ್ರೀಂ ಕೋರ್ಟ ಸಹ ಹೈಕೋರ್ಟಿನ ಆದೇಶವನ್ನು ಎತ್ತಿಹಿಡಿದಿದೆ.
`ರಮ್ಮಿ, ಅಂದರ್ ಬಾಹರ್ ಆಟಗಳು ಜೂಜಾಟದ ವ್ಯಾಪ್ತಿಗೆ ಬರುವುದಿಲ್ಲ. ಕೌಶಲ್ಯಪೂರಿತ ಚಟುವಟಿಕೆಗಳ ಪಟ್ಟಿಗೆ ಅವು ಬರಲಿದೆ’ ಎಂದು ಸೌರಭ ಹೆಗಡೆ ಅವರು ಹೈಕೋರ್ಟಿನಲ್ಲಿ ವಾದಿಸಿದ್ದರು. ಸುಪ್ರೀಂ ಕೋರ್ಟ ಸಹ ಇದೀಗ ಅದೇ ವಾದವನ್ನು ಎತ್ತಿಹಿಡಿದಿದೆ. ಹೀಗಾಗಿ ಅಂದರ್ ಬಾಹರ್ ವಿಷಯದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.
`ಜೂಜಾಟದಿಂದ ಜೀವನ ಹಾಳು’