ರಾಜಕೀಯ, ಹೋರಾಟದ ಜೊತೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಕುಮಟಾದ ನಾಯಕ ಸೂರಜ ನಾಯ್ಕ ಸೋನಿ ಅವರು ಯಲ್ಲಾಪುರದಲ್ಲಿಯೂ ಬೆಂಬಲಿಗರನ್ನು ಹೊಂದಿದ್ದು, ಭಾನುವಾರ ಅಭಿಮಾನಿಗಳು ಸೂರಜ ನಾಯ್ಕ ಸೋನಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ.
ಯಲ್ಲಾಪುರದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ನಡೆದ ಈಡಿಗ ಈಡಿಗ ನಾಮದಾರಿ ಅಭಿವೃದ್ಧಿ ಸಂಘದ ರಜತ ಮಹೋತ್ಸವಕ್ಕೆ ಸೂರಜ ನಾಯ್ಕ ಸೋನಿ ಅವರು ಆಗಮಿಸಿದ್ದರು. ಸೂರಜ ನಾಯ್ಕ ಸೋನಿ ಅವರು ಆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಈ ವಿಷಯ ಅರಿತು ಅವರ ಬೆಂಬಲಿಗರು ಅಲ್ಲಿಗೆ ತೆರಳಿದ್ದು, ಅದಾದ ನಂತರ ಪ್ರವಾಸಿ ಮಂದಿರ ಬಳಿಯ ಉದ್ಯಾನವನದಲ್ಲಿ ಒಟ್ಟಿಗೆ ಸೇರಿದರು. ಸೂರಜ ನಾಯ್ಕ ಅವರ ಹೋರಾಟ, ಸಮಾಜಪರ ಚಿಂತನೆಯ ಬಗ್ಗೆ ಅಭಿಮಾನಿಗಳು ಮಾತನಾಡಿದರು. ಅವರ `ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ’ ಎಂದು ಹಾರೈಸಿದರು.
ಸೋಮೇಶ್ವರ ನಾಯ್ಕ, ಗಿರೀಶ ಬೋವಿವಡ್ಡರ್, ಕಾರ್ತಿಕ ನಾಯ್ಕ, ಯೋಗೇಶ ನಾಯ್ಕ, ಮಹೇಶ ಬೋವಿವಡ್ಡರ್, ಮಾಲತೇಶ ಜಲದಿ ಸೇರಿ ಸೂರಜ ನಾಯ್ಕ ಸೋನಿ ಅವರನ್ನು ಗೌರವಿಸಿದರು. `ನೊಂದವರಿಗೆ ನ್ಯಾಯ ಕೊಡಿಸಿದ ಸಮಾಧಾನ ನನಗಿದೆ. ಅಧಿಕಾರ ಇಲ್ಲದಿದ್ದರೂ ನನ್ನ ಸೇವೆ ನಿರಂತರ’ ಎಂದು ಸೂರಜ ನಾಯ್ಕ ಸೋನಿ ಅವರು ಈ ವೇಳೆ ಹೇಳಿದರು. `ಜೀವನದಲ್ಲಿ ಎಲ್ಲರಿಗೂ ಏಕಕಾಲಕ್ಕೆ ಯಶಸ್ಸು ಸಿಗುವುದಿಲ್ಲ. ಆದರೆ, ಒಳ್ಳೆಯ ಮಾರ್ಗದಲ್ಲಿ ಹೋರಾಟ ಹಾಗೂ ಕಷ್ಟಪಟ್ಟ ಪ್ರತಿಯೊಬ್ಬರಿಗೂ ಯಶಸ್ಸು ಖಂಡಿತ’ ಎಂಬ ವಿಶ್ವಾಸವ್ಯಕ್ತಪಡಿಸಿದರು.