ಬಟ್ಟೆ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಪಾಂಡುರoಗ ಮೂಲೆ ಅವರನ್ನು ಅಡಿವೆಪ್ಪ ಮುಡಸಾಲಿ ಅವರು ಕಾಡಿನಲ್ಲಿ ಕಟ್ಟಿ ಹಾಕಿದ್ದಾರೆ. ಅದಾದ ನಂತರ ಪಾಂಡುರoಗ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಪ್ರಾಣ ಉಳಿಸಿಕೊಂಡು ಬಂದ ಅವರು ಆಸ್ಪತ್ರೆ ಸೇರಿ ಚಿಕಿತ್ಸೆಪಡೆದಿದ್ದಾರೆ.
ಮುಂಡಗೋಡದ ಅಲ್ಲಳ್ಳಿಯಲ್ಲಿ ಪಾಂಡುರoಗ ಪುಂಡಳಿಕಪ್ಪ ಮೂಲೆ ಅವರು ವಾಸವಾಗಿದ್ದಾರೆ. ಬೈಕಿನ ಮೇಲೆ ಊರುರು ಅಲೆದಾಟ ನಡೆಸಿ ಅವರು ಬಟ್ಟೆ ವ್ಯಾಪಾರ ಮಾಡುತ್ತಾರೆ. ಡಿಸೆಂಬರ್ 13ರಂದು ಬಟ್ಟೆ ವ್ಯಾಪಾರಕ್ಕಾಗಿ ಅವರು ಮನೆಯಿಂದ ಹೊರಟಿದ್ದರು. ಆಲಳ್ಳಿಯಿಂದ ಬೊಮ್ಮನಳ್ಳಿ ಕಡೆ ಬೈಕಿನಲ್ಲಿ ಹೋಗುತ್ತಿದ್ದ ಪಾಂಡುರoಗ ಅವರಿಗೆ ಬ್ರಹ್ಮ ದೇವಸ್ಥಾನದ ಬಳಿ ಅಲ್ಲಳ್ಳಿಯ ಅಡಿವೆಪ್ಪ ಹನುಮಂತ ಮುಡಸಾಲಿ ಅವರು ಎದುರಾದರು.
Advertisement. Scroll to continue reading.
Advertisement. Scroll to continue reading.
ಅಡಿವೆಪ್ಪ ಮುಡಸಾಲಿ ಅವರು ಬೈಕಿಗೆ ಅಡ್ಡಲಾಗಿ ಕೈ ಮಾಡಿದರು. ಪಾಂಡುರoಗ ಮೂಲೆ ಅವರು ಬೈಕ್ ನಿಲ್ಲಿಸಿದಾಗ `ಕಾಡಿನಲ್ಲಿ ಕಟ್ಟಿಗೆ ಕೊಯ್ದಿಟ್ಟಿದ್ದೇನೆ. ತಲೆ ಮೇಲೆ ಹೋರಿಸು’ ಎಂದು ಅಡಿವೆಪ್ಪ ಮುಡಸಾಲಿ ಅವರು ಮನವಿ ಮಾಡಿದರು. ಅದನ್ನು ನಂಬಿ ಪಾಂಡುರoಗ ಅವರು ಕಾಡಿನ ಕಡೆ ಹೆಜ್ಜೆ ಹಾಕಿದರು. ಆದರೆ, ಪೂರ್ವ ತಯಾರಿಯ ಪ್ರಕಾರ ಅಡಿವೆಪ್ಪ ಮುಡಸಾಲಿ ಅವರು ಪಾಂಡುರoಗ ಮೂಲೆ ಅವರನ್ನು ಹಗ್ಗದಿಂದ ಕಟ್ಟಿ ಹಾಕಿದರು. `ನಿನ್ನ ಹಾರಾಟ ಜಾಸ್ತಿ ಆಗಿದೆ’ ಎಂದು ಬೈಗುಳ ಶುರು ಮಾಡಿದರು. ಅಡಿವೆಪ್ಪ ಮುಡಸಾಲಿ ಅವರು ಪಾಂಡುರoಗ ಮೂಲೆ ಅವರ ಕಪಾಳಕ್ಕೆ ಬಾರಿಸಿದರು.
Advertisement. Scroll to continue reading.
ಅದಾದ ನಂತರ ಅಲ್ಲಿದ್ದ ಕಟ್ಟಿಗೆ ಕಾವಿನಿಂದಲೂ ಪಾಂಡುರAಗ ಮೂಲೆ ಅವರಿಗೆ ಅಡಿವೆಪ್ಪ ಮೂಡಸಾಲಿ ಅವರು ಥಳಿಸಿದರು. ಕುತ್ತಿಗೆಗೆ ಹಗ್ಗ ಹಾಕಿ `ಕೊಂದೇ ಬಿಡುವೆ’ ಎಂದು ಬೆದರಿಸಿದರು. ಅಲ್ಲಿಂದ ತಪ್ಪಿಸಿಕೊಂಡು ಬಂದ ಪಾಂಡುರAಗ ಮೂಲೆ ಅವರು ಆಸ್ಪತ್ರೆಗೆ ಸೇರಿ ಸುಧಾರಿಸಿಕೊಂಡರು. ಅದಾದ ನಂತರ ಪೊಲೀಸ್ ಠಾಣೆಗೆ ತೆರಳಿ ತಮಗಾದ ಕೆಟ್ಟ ಅನುಭವ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿದರು.