ಮಾನಸಿಕವಾಗಿ ಕುಗ್ಗಿದ್ದ ಶಿರಸಿಯ ಚೈತ್ರಾ ಹೆಗಡೆ ಅವರು ವಿಷ ಕುಡಿದಿದ್ದು, ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ಕರೆದೊಯ್ದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಶಿರಸಿಯ ಮಣಜವಳ್ಳಿ ಶಾಂತಿನಗರದ ಚೈತ್ರಾ ರಮಣ ಹೆಗಡೆ (40) ಅವರು ವಾಸವಾಗಿದ್ದರು. ಎರಡು ವರ್ಷದಿಂದ ಮಾನಸಿಕವಾಗಿ ಕುಗ್ಗಿದ್ದ ಅವರು ಜೀವನದಲ್ಲಿಯೂ ನೊಂದಿದ್ದರು. ಚೈತ್ರಾ ಅವರ ಪತಿ ರಮಣ ಹೆಗಡೆ ಹಾಗೂ ಪುತ್ರ ದರ್ಶನ್ ಅವರು ಡಿಸೆಂಬರ್ 21ರಂದು ಬೆಂಗಳೂರಿಗೆ ಹೋಗಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ಚೈತ್ರಾ ಹೆಗಡೆ ಅವರು ಅದೇ ದಿನ ವಿಷ ಕುಡಿದರು.
ಮನೆಯಲ್ಲಿದ್ದ ಮಾಕ್ಸೋನ್ ಎಂಬ ಕಳೆನಾಶಕ ಸೇವಿಸಿ ಚೈತ್ರಾ ಹೆಗಡೆ ಅವರು ಅಸ್ವಸ್ಥರಾಗಿದ್ದರು. ಈ ವಿಷಯ ಅರಿತ ಅಕ್ಕಪಕ್ಕದವರು ಚೈತ್ರಾ ಹೆಗಡೆ ಅವರನ್ನು ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ಕರೆತಂದರು. ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬದವರು ಚೈತ್ರಾ ಅವರನ್ನು ಧಾರವಾಡಕ್ಕೆ ಕರೆದೊಯ್ದರು.
ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚೈತ್ರಾ ಹೆಗಡೆ ಅವರ ಚಿಕಿತ್ಸೆ ಮುಂದುವರೆಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಡಿಸೆಂಬರ್ 23ರಂದು ಚೈತ್ರಾ ಹೆಗಡೆ ಅವರು ಸಾವನಪ್ಪಿದರು. ಸದ್ಯ ಶಿರಸಿ ಭೂತೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟನಮನೆಯ ಗಣಪತಿ ನಾರಾಯಣ ಹೆಗಡೆ ಅವರು ಈ ಬಗ್ಗೆ ಮಾಹಿತಿ ನೀಡಿದರು.