ಶಿರಸಿಯಲ್ಲಿ ಪೆಟ್ರೋಲ್ ಬಂಕನ್ನು ಹೊಂದಿರುವ ಶ್ರೀಕುಮಾರ ಸಮೂಹ ಸಂಸ್ಥೆಯವರು ಅರಣ್ಯ ಅತಿಕ್ರಮಣ ಮಾಡಿದ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, `ಆ ಆರೋಪ ಸತ್ಯವಲ್ಲ’ ಎಂದು ಶ್ರೀಕುಮಾರ ಸಮೂಹ ಸಂಸ್ಥೆ ಮಾಲಕ ವೆಂಕಟರಮಣ ಹೆಗಡೆ ಕವಲಕ್ಕಿ ಹೇಳಿದ್ದಾರೆ.
ಶಿರಸಿಯ ಇಸಳೂರಿನಲ್ಲಿರುವ ಶ್ರೀಕುಮಾರ ಸಮೂಹ ಸಂಸ್ಥೆಯ ಪೆಟ್ರೋಲ್ ಬಂಕಿನ ಬಳಿ ಅರಣ್ಯ ಇಲಾಖೆ ಜಾಗ ಅತಿಕ್ರಮಣವಾದ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. `ಅರಣ್ಯ ಇಲಾಖೆಯವರು ತಮ್ಮ ಜಾಗದ ಸುತ್ತ ಕಾಲುವೆ ತೆಗೆದಿದ್ದಾರೆ. ಪೆಟ್ರೋಲ್ ಬಂಕಿನವರಿAದ ಅರಣ್ಯ ಅತಿಕ್ರಮಣ ನಡೆದಿಲ್ಲ’ ವೆಂಕಟರಮಣ ಹೆಗಡೆ ಹೇಳಿದ್ದಾರೆ. `ಎರಡು ವರ್ಷದ ಹಿಂದೆ ಕೆಲವರು ಪೆಟ್ರೋಲ್ ಬಂಕ್ ಅರಣ್ಯ ಇಲಾಖೆಯ ಜಾಗದಲ್ಲಿದೆ ಎಂಬ ಸುದ್ದಿ ಹರಿಬಿಟ್ಟು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಪೆಟ್ರೋಲ್ ಬಂಕ್ ಅಧಿಕೃತ ಜಾಗದಲ್ಲಿರುವ ಕಾರಣ ನಾನೂ ಅವರ ಬೆದರಿಕೆಗೆ ನಾನು ಬಗ್ಗಿಲ್ಲ. ಈಗ ಮತ್ತೆ ಅದೇ ಕೆಲಸ ನಡೆದಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು. `ಪೆಟ್ರೋಲ್ ಬಂಕ್ ಅಧಿಕೃತ ಜಾಗದಲ್ಲಿದೆ. ನಾನು ಯಾವುದೇ ಕಾರಣಕ್ಕೂ ಹಣ ಕೊಡಲ್ಲ’ ಎಂದರು.
`ಪೆಟ್ರೋಲ್ ಬಂಕ್ ಸ್ಥಾಪಿಸಲು 16 ಇಲಾಖೆಯ ಅನುಮತಿ ಪತ್ರ ಅವಶ್ಯವಿದ್ದು, ಪೆಟ್ರೋಲ್ ಬಂಕ್ ನಿರ್ಮಾಣವಾಗುವ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಂಬAಧಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿದ ನಂತರವೇ ಪೆಟ್ರೋಲ್ ಬಂಕ್ ಆರಂಭಿಸಲಾಗಿದೆ. ಸಂಸ್ಥೆಯಿAದ ಹಣ ವಿನಿಯೋಗಿಸಿದರೂ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆ ಅಧಿನದಲ್ಲಿ ಬರುವುದರಿಂದ ಅದು ಸಾರ್ವಜನಿಕರ ಆಸ್ತಿಯಾಗಿರುತ್ತದೆ’ ಎಂದವರು ಹೇಳಿದ್ದಾರೆ.
`ಪೆಟ್ರೋಲ್ ಬಂಕ್ ಅಧಿಕೃತ ಭೂ ಪರಿವರ್ತನೆ ಆದ ಜಾಗದಲ್ಲಿದೆ. ಆ ಜಾಗದ ಎದುರಿನಲ್ಲಿರುವುದು ಅರಣ್ಯ ಇಲಾಖೆಯ ಜಾಗವಾಗಿದ್ದು, ಅದಕ್ಕೆ ಅವರು ರಕ್ಷಣೆ ಮಾಡಿಕೊಂಡರೆ ನಾನು ತಕರಾರು ಸಲ್ಲಿಸುವುದಿಲ್ಲ. ಅರಣ್ಯ ಇಲಾಖೆಯವರು ಸಹ `ಶ್ರೀಕುಮಾರದವರು ಜಾಗ ಅತಿಕ್ರಮಿಸಿದ್ದಾರೆ’ ಎಂದು ನೋಟಿಸ್ ನೀಡಿಲ್ಲ’ ಎಂದವರು ಸ್ಪಷ್ಠಪಡಿಸಿದರು. `ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಸಂಸ್ಥೆಯ ಜಾಗದಲ್ಲಿ 10 ಸ್ನಾನ ಹಾಗೂ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು, ಪೆಟ್ರೋಲ್ ಬಂಕ್‌ನ ಎದುರಿನ ಖಾಲಿ ಸಾರ್ವಜನಿಕ ಬಸ್ಸುಗಳು ನಿಲುಗಡೆ ಮಾಡುತ್ತವೆಯೇ ಹೊರತು ಸಂಸ್ಥೆಯ ಬಸ್ಸುಗಳು ಖಾಯಂ ನಿಲುಗಡೆಯಾಗುವುದಿಲ್ಲ’ ಎಂದು ತಿಳಿಸಿದರು.