ಹೊನ್ನಾವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪದೇ ಪದೇ ಗೋ ಕಳ್ಳತನ ನಡೆಯುತ್ತಿದ್ದು, ರಾತ್ರಿಯಿಡೀ ಕಾದ ಜನ ಆ ಕಳ್ಳರ ಕಾರ್ಯಕ್ಕೆ ತಾತ್ಕಾಲಿಕ ತಡೆ ಒಡ್ಡಿದ್ದಾರೆ. ಐಷಾರಾಮಿ ಕಾರನ್ನು ಅಡ್ಡಗಟ್ಟಿದನ್ನು ನೋಡಿ ಗೊ ಕಳ್ಳರು ಓಡಿ ಪರಾರಿಯಾಗಿದ್ದಾರೆ.
ರಸ್ತೆ ಬದಿಯ ಹಸುಗಳನ್ನು ಕಾರಿನಲ್ಲಿ ತುಂಬಿಕೊAಡು ಹೋಗುವವರನ್ನು ಹಿಡಿಯುವುದಕ್ಕಾಗಿ ಹೊನ್ನಾವರದ ಜಡ್ಡಿಗದ್ದೆಯ ಜನ ರಾತ್ರಿ ಕಾವಲು ಕೂತಿದ್ದರು. ನಿರೀಕ್ಷೆಯಂತೆ ನಸುಕಿನ ಅವಧಿಯಲ್ಲಿ ಕಳ್ಳರು ಕಾರಿನಲ್ಲಿ ಬಂದಿದ್ದು, ಗೋವುಗಳನ್ನು ಕದಿಯುವಾಗಲೇ ಜನ ದಾಳಿ ನಡೆಸಿದರು. ಅವರ ವಾಹನ ತಡೆದು ಪೊಲೀಸರಿಗೆ ಫೋನ್ ಮಾಡಿದರು. ಜನರನ್ನು ನೋಡಿದ ಕಳ್ಳರು ಕಾರು ಹಾಗೂ ಮೊಬೈಲ್ ಬಿಟ್ಟು ಕಾಡಿನ ಕಡೆ ಓಡಿದರು.
ಕಡತೋಕಾ, ಜಡ್ಡಿಗದ್ದೆ, ಮಾಡಗೇರಿ, ಊರಕೇರಿ, ಕೆಕ್ಕಾರ, ಗುಡ್ಡಿನಕಟ್ಟು, ನವೀಲಗೋಣ, ಹಳದೀಪುರ, ಬಾದಳ್ಳಿ, ಚಿಪ್ಪಿಹಕ್ಲು, ನವೀಲಗೋಣ ಸೇರಿ 400ಕ್ಕೂ ಅಧಿಕ ಜನ ನಡೆಸಿದ ಈ ಕಾರ್ಯಾಚರಣೆಯಿಂದ ಗೋ ಕಳ್ಳರು ಬೆದರಿದರು. ಚಂದಾವರದಿAದ ಅರೇಅಂಗಡಿ ಮಾರ್ಗವಾಗಿ ಭಟ್ಕಳಕ್ಕೆ ಸಾಗಾಟವಾಗುತ್ತಿದ್ದ ಗೋವುಗಳನ್ನು ಅಲ್ಲಿನ ಜನ ರಕ್ಷಿಸಿದರು. ಈ ಅವಧಿಯಲ್ಲಿ ಗೋ ಕಳ್ಳರ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿ ಬಗೆ ಬಗೆಯ ನಂಬರ್ ಪ್ಲೇಟ್ ಸಿಕ್ಕಿವೆ.