ವಿಶ್ವದರ್ಶನ ದಿನ ಪತ್ರಿಕೆ ಕೊಡುವ `ನ್ಯಾಷನಲ್ ಐಕಾನ್ ಅವಾರ್ಡ್’ಗೆ ಶಿರಸಿಯ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ವಿಶ್ವದರ್ಶನ ದಿನಪತ್ರಿಕೆ ಸಂಪಾದಕ ಎಸ್ ಎಸ್ ಪಾಟೀಲ್ ಅವರು ಈ ಮಾಹಿತಿ ಹಂಚಿಕೊAಡಿದ್ದು, `ಹಲವು ದಶಕದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ವಿನಾಯಕ ಶೆಟ್ಟಿ ಅವರ ಕಾರ್ಯ ಗುರುತಿಸಿ ಈ ಪ್ರಶಸ್ತಿ ಕೊಡಲಾಗುತ್ತಿದೆ’ ಎಂದಿದ್ದಾರೆ. `ಸಾಮಾಜಿಕ ಕ್ಷೇತ್ರದಲ್ಲಿ ವಿನಾಯಕ ಶೆಟ್ಟಿ ಅವರು ಮಾಡಿದ ಸಾಧನೆಯನ್ನು ವಿಶ್ವದರ್ಶನ ಪತ್ರಿಕೆ ಗಮನಿಸಿ ಗೌರವಿಸುತ್ತಿದೆ. ವಿನಾಯಕ ಶೆಟ್ಟಿ ಅವರು ಗಣೇಶೋತ್ಸವ ಸಂಘಟನೆ, ಶಿಕ್ಷಣ, ಸಾಮಾಜಿಕ ಸೇವೆಯಲ್ಲಿಯೂ ಸಕ್ರೀಯರಾಗಿದ್ದಾರೆ’ ಎಂದವರು ಸ್ಮರಿಸಿದ್ದಾರೆ.
ವಸಂತ ಶೆಟ್ಟಿ ಅವರಿಂದ ಸ್ಥಾಪನೆಯಾಗಿರುವ ಭೂತೇಶ್ವರ ಪತ್ತಿನ ಸಹಕಾರಿ ಸಂಘ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಧೃಡ ಸಂಸ್ಥೆಯಾಗಿ ಬೆಳೆದಿದೆ. ಅದಕ್ಕೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಕಾರಣರಾಗಿದ್ದಾರೆ. ಅವರ ಸಹಕಾರ ಸೇವೆಯನ್ನು ವಿಶ್ವದರ್ಶನ ಪತ್ರಿಕೆ ಸ್ಮರಿಸಿದೆ. ಡಿಸೆಂಬರ್ 27ರಂದು ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.