ಶಿರಸಿಯ ಸಹಾಯ ಟ್ರಸ್ಟ್ ಸಹಯೋಗದಲ್ಲಿ ಕಸ್ತೂರಬಾ ನಗರದಲ್ಲಿ ನಡೆಯುತ್ತಿರುವ ಲಿಟ್ಲಪ್ಲವರ್ ಸ್ಕೂಲ್’ಗೆ ಭೂತೇಶ್ವರ ಪತ್ತಿನ ಸಹಕಾರಿ ಸಂಘದಿoದ ಸಹಾಯ ಮಾಡಲಾಗಿದೆ. ಆ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಸಮವಸ್ತ್ರವನ್ನು ಭೂತೇಶ್ವರ ಪತ್ತಿನ ಸಹಕಾರಿ ಸಂಘ ನೀಡಿದೆ.
ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅವಧಿಯಲ್ಲಿ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಈ ನೆರವು ನೀಡಿದರು. `ಸರ್ಕಾರದ ಯಾವುದೇ ನೆರವಿಲ್ಲದೇ ಅತ್ಯುತ್ತಮವಾಗಿ ಈ ಶಾಲೆ ನಡೆಯುತ್ತಿದೆ. ಶಾಲೆಯ ಅಭಿವೃದ್ಧಿಗೆ ಎಲ್ಲ ಸಹಕಾರ ಅಗತ್ಯವಿದ್ದು, ಸಮಾಜುಮುಖಿ ಕೆಲಸ ಮಾಡುವ ಶಾಲೆಗೆ ನೆರವು ನೀಡಲು ಸದಾ ಬದ್ಧ’ ಎಂದವರು ಹೇಳಿದರು.
ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿ `ಲಿಟ್ಲಪ್ಲವರ್ ಸ್ಕೂಲಿನಲ್ಲಿ ಎಲ್ ಕೆ ಜಿಯಿಂದ ಐದನೇ ತರಗತಿಯವರೆಗೆ ನೂರಕ್ಕೂ ಅಧಿಕ ಮಕ್ಕಳಿದ್ದಾರೆ. ಮಕ್ಕಳ ಅನುಕೂಲಕ್ಕಾಗಿ ಕರಾಟೆ ವಿಭಾಗವನ್ನೂ ಸಹ ಆರಂಭಿಸಲಾಗಿದೆ’ ಎoದು ತಿಳಿಸಿದರು. ಹೊಸ ಬಟ್ಟೆ ಸ್ವೀಕರಿಸಿದ ಮಕ್ಕಳು ಸಂತಸಹAಚಿಕೊAಡರು. ನಗರಸಭೆ ಸದಸ್ಯ ಖಾದರ್ ಆನವಟ್ಟಿ, ನ್ಯಾಯವಾದಿ ಎಸ್ ಎನ್‌ನಾಯ್ಕ, ಕೆಡಿಸಿಸಿ ನಿವೃತ್ತ ಅಧಿಕಾರಿ ಎಮ್ ಡಿ ಪ್ರಕಾಶ ಮುದ್ಗುಣಿ, ಸಹಾಯ ಟ್ರಸ್ಟ್ ಕಾರ್ಯದರ್ಶಿ ಶಾರದಾ ಶೆಟ್ಟಿ, ಮುಖ್ಯೋದ್ಯಾಪಕಿ ಸರೋಜಾ ನಾಯ್ಕ ಇದ್ದರು. ಮಕ್ಕಳಿಂದ ನಡೆದ ಮನರಂಜನಾ ಕಾರ್ಯಕ್ರಮಗಳು ಗಮನಸೆಳೆದವು.