ಶಿರಸಿ – ಬನವಾಸಿ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆ ನಿಂತಿದ್ದ ವ್ಯಕ್ತಿಯ ಮೇಲೆ ಮೂವರು ಹಲ್ಲೆ ಮಾಡಿದ್ದಾರೆ. ಅನೈತಿಕ ಸಂಬoಧ ಹಲ್ಲೆಗೆ ಕಾರಣ ಎನ್ನುವ ಮಾಹಿತಿಯಿದ್ದರೂ ಹಲ್ಲೆಗೆ ಕಾರಣ ಎಂಬ ಸುದ್ದಿ ಹರಿದಾಡುತ್ತಿದ್ದರೂ ಹೊಡೆದಾಟಕ್ಕೆ ಕಾರಣವಾದ ನೈಜ ರಹಸ್ಯ ಹೊರ ಬಿದ್ದಿಲ್ಲ!
ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಗೌಡಳ್ಳಿಯ ಗೌಂಡಿ ತನ್ವೀರಖಾನ್ ನಸರುಲ್ಲಾ ಖಾನ್ ಹಲ್ಲೆಗೆ ಒಳಗಾದ ವ್ಯಕ್ತಿ. ಶಿರಸಿ ಗಡಿಹಳ್ಳಿಯ ಮಹಮದ್ ಶರೀಫ್ ಅಬ್ದುಲ್ ಖುದ್ದುಸ್ ಶೇಖ್, ಅರೆಕೊಪ್ಪದ ಮಜೀರ್ ಅಬ್ದುಲ್ ಜಬ್ಬಾರ್ ಹಾಗೂ ಅರೆಕೊಪ್ಪದ ಖಯಂ ಮಹಮದ್ ಅಲಿ ಸೇರಿ ತನ್ವೀರ್ ಖಾನ್ ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಾಹಿತಿಗಳ ಪ್ರಕಾರ ತನ್ವೀಖಾನ್ ಅವರು ಮಹಮದ್ ಶೇಖ್ ಅವರ ಅಕ್ಕನ ಮಗಳ ಭೇಟಿಗೆ ಬರುತ್ತಿದ್ದು, ಅದನ್ನು ಆರೋಪಿತರು ವಿರೋಧಿಸಿದ್ದರು. ಎಚ್ಚರಿಕೆ ನೀಡಿದ್ದರೂ ಸಹ ಅವರ ಪ್ರೇಮ-ಪ್ರಣಯ ಕದ್ದುಮುಚ್ಚಿ ನಡೆಯುತ್ತಿತ್ತು. ಇದನ್ನು ಸಹಿಸದೇ ಮೂವರು ಸೇರಿ ತನ್ವಿರ್ ಖಾನ್ ಅವರನ್ನು ಥಳಿಸಿದ್ದಾರೆ.
ಆದರೆ, ತಮ್ಮ ಮೇಲಾದ ದಾಳಿಯ ಬಗ್ಗೆ ತನ್ವೀರಖಾನ್ ನೀಡಿದ ದೂರಿನಲ್ಲಿ ಮತ್ತೊಂದು ಕಥೆ ಹೇಳಿದ್ದಾರೆ. ಗೌಡಳ್ಳಿಯಲ್ಲಿರುವ ತಂದೆ ನಸರುಲ್ಲಾ ಖಾನ್ ಅವರ ಭೇಟಿಯಾಗಿ ಮರಳುವಾಗ ಮೂವರು ದಾಳಿ ನಡೆಸಿದ ಬಗ್ಗೆ ಅವರು ದೂರಿದ್ದಾರೆ. `ಬನವಾಸಿಯ ಅರೆಕೊಪ್ಪ ಸರ್ವಿಸ್ ಸ್ಟೇಶನ್ ಬಳಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುವಾಗ ಮೂವರು ತಡೆದರು. ಇಲ್ಲಿ ಏಕೆ ಮೂತ್ರ ವಿಸರ್ಜಿಸುವೆ? ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ’ ಎಂದವರು ಪೊಲೀಸರ ಬಳಿ ಹೇಳಿದ್ದಾರೆ.
ಜನವರಿ 2ರಂದು ಈ ಹೊಡೆದಾಟ ನಡೆದಿದ್ದು, ಅದೇ ದಿನ ತನ್ವೀರಖಾನ್ ಅದೇ ದಿನ ಪೊಲೀಸ್ ದೂರು ನೀಡಿದ್ದಾರೆ. ಅದಾದ ನಂತರ ನ್ಯಾಯಾಲಯದ ಮೊರೆ ಹೊಗಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ಕೊಡಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.