ಮಗಳ ಹುಟ್ಟುಹಬ್ಬದ ಪ್ರಯುಕ್ತ ದಾಂಡೇಲಿಯ ನೆಂಟರ ಮನೆಗೆ ಹೋಗಿದ್ದ ಹಳಿಯಾಳದ ದಂಪತಿಗೆ ಅಲ್ಲಿದ್ದವರು ಸುತ್ತಿಗೆಯಿಂದ ಹೊಡೆದು ಓಡಿಸಿದ್ದಾರೆ!
ಹಳಿಯಾಳದ ಯಡೋಗಾ ಬಳಿಯ ಮುದಲ್ಗೇರದಲ್ಲಿ ಯುಪಿಎಸ್ ದುರಸ್ಥಿ ಕೆಲಸ ಮಾಡುವ ಪಾಂಡುರoಗ ಜಯಪ್ಪ ಮುಗೇರಿ ಹಾಗೂ ಅವರ ಪತ್ನಿ ರಂಜಿತಾ ಮುಗೇರಿ ಅವರು ಪೆಟ್ಟು ತಿಂದಿದ್ದಾರೆ.
ಜನವರಿ 4ರಂದು ಪಾಂಡುರoಗ ಅವರ ಪುತ್ರಿ ದೃತಿ ಅವರ ಹುಟ್ಟುಹಬ್ಬವಿತ್ತು. ದೃತಿ ಅವರು ದಾಂಡೇಲಿ ಹಾರ್ನೋಡ ಗ್ರಾಮ ಸಾಕ್ಷಿಹಳ್ಳಿಯಲ್ಲಿ ವಾಸವಾಗಿದ್ದು, ಹುಟ್ಟು ಹಬ್ಬಕ್ಕೆ ಶುಭ ಕೋರಲು ಪಾಂಡುರoಗ ಹಾಗೂ ರಂಜಿತಾ ದಂಪತಿ ಹೋಗಿದ್ದರು. ಆದರೆ, ಅಲ್ಲಿದ್ದ ರೇಷ್ಮಾ ಗೋಕುಲ ಮಿರಾಶಿ ಅವರು ಪಾಂಡುರoಗ ಅವರಿಗೆ ಮಗಳನ್ನು ಭೇಟಿ ಆಗಲು ಬಿಡಲಿಲ್ಲ. ಪ್ರಶ್ನಿಸಿದಾಗ ಕತ್ತಿಯಿಂದ ಪಾಂಡುರoಗ ಅವರಿಗೆ ಹೊಡೆಯಲು ಶುರು ಮಾಡಿದರು.
ತಡೆಯಲು ಬಂದ ಪಾಂಡುರoಗ ಅವರ ಪತ್ನಿ ರಂಜತಾ ಮೇಲೆ ಸುತ್ತಿಗೆಯಿಂದ ಬಡಿದು ಗಾಯ ಮಾಡಿದರು. ಆ ವೇಳೆ ಅಲ್ಲಿದ್ದ ಅಕ್ಷತಾ ರಾಘವೇಂದ್ರ, ಗೋಕುಲ ಲೋಕಪ್ಪ ಮಿರಾಶಿ ಹಾಗೂ ಪ್ರತೀಕಾ ಗೋಕುಲ ಮಿರಾಶಿ ಅವರು ಈ ದಂಪತಿಯನ್ನು ಹಿಡಿದು ಥಳಿಸಿದರು. ಅವರೆಲ್ಲರೂ ಸೇರಿ ಆ ದಂಪತಿಯನ್ನು ಮನೆಯಿಂದ ಹೊರದಬ್ಬಿದರು. ತಮಗಾದ ನೋವಿನ ಬಗ್ಗೆ ಪಾಂಡುರoಗ ಮೋಗ್ರಿ ಅವರು ದಾಂಡೇಲಿ ಪೊಲೀಸರಿಗೆ ದೂರಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.