ಮೈಸೂರಿನಿಂದ ದಾಂಡೇಲಿಗೆ ಹೊರಟಿದ್ದ ಬಸ್ಸು ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಮಂಚಿಕೇರಿ ಸಮೀಪದ ಚವತ್ತಿ-ಉಮ್ಮಚ್ಗಿ ನಡುವಿನ ಗೋರ್ಸಗದ್ದೆ ಬಳಿ ಈ ಬಸ್ಸು ರಸ್ತೆ ಪಕ್ಕದ ಧರೆಗೆ ಗುದ್ದಿದೆ.
ಶುಕ್ರವಾರ ಮೈಸೂರಿನಿಂದ ಹೊರಟ ಖಾಸಗಿ ಬಸ್ಸಿನಲ್ಲಿ 23ಕ್ಕೂ ಅಧಿಕ ಪ್ರಯಾಣಿಕರಿದ್ದರು. ಅವರೆಲ್ಲರೂ ದಾಂಡೇಲಿ ಪ್ರವಾಸಕ್ಕೆ ಹೊರಟಿದ್ದರು. ಶಿರಸಿಯವರೆಗೂ ಬಸ್ ಚಾಲಕ ಸುರಕ್ಷಿತ ಚಾಲನೆ ಮಾಡಿದ್ದು, ಅದಾದ ನಂತರ ನಿದ್ರೆಯ ಮಂಪರಿಗೆ ಜಾರಿದರು. ಪರಿಣಾಮ ಆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿತು. ಬಸ್ಸು ವೇಗವಾಗಿ ಗುದ್ದಿದ್ದರಿಂದ ಚಾಲಕನಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು.
ಶನಿವಾರ ಮುಂಜಾನೆ ಈ ಅವಘಡ ನಡೆದಿದ್ದು, ಬಸ್ಸಿನಲ್ಲಿದ್ದ ಇನ್ನಿತರ ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ಅಪಘಾತದಲ್ಲಿ ಅನೇಕ ಪ್ರಯಾಣಿಕರಿಗೆ ನೋವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಯಿತು. ಬಸ್ ಅಪಘಾತವಾಗಿರುವುದನ್ನು ಅರಿತು ಅನೇಕರು ಅಲ್ಲಿಗೆ ಭೇಟಿ ನೀಡಿದರು. ಗಾಯಗೊಂಡವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಗಾಯಗೊಂಡ ಬಹುತೇಕರು ಮೈಸೂರಿನವರಾಗಿದ್ದು, ಸ್ಥಳೀಯರ ಸಹಕಾರವನ್ನು ಪ್ರವಾಸಿಗರು ಸ್ಮರಿಸಿದರು.