ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ ಯಲ್ಲಾಪುರದಲ್ಲಿ ಬಾಯ್ಲರ್ ಸ್ಪೋಟವಾಗಿದೆ. ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಈ ಅವಘಡ ನಡೆದಿದೆ.
ಹೆದ್ದಾರಿಯ ಎಲ್ಲಾ ಕಡೆ ಹೊಂಡಗಳಿoದ ಕೂಡಿದ್ದು, ಸದ್ಯ ಅದರ ದುರಸ್ಥಿ ಕೆಲಸ ನಡೆದಿದೆ. ಪ್ಯಾಚ್‌ವರ್ಕ ಕೆಲಸ ಮುಕ್ತಾಯದ ನಂತರ ಹೆದ್ದಾರಿಯ ಉದ್ದಕ್ಕೂ ಬಿಳಿ ಬಣ್ಣದ ಪಟ್ಟಿಗಳನ್ನು ಎಳೆಯಬೇಕಿದೆ. ಈ ಬಣ್ಣ ಬಡಿಯುವ ಕೆಲಸವನ್ನು ಗದಗದ ಅನಂತ ಆರ್ಟ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದೆ.
ಅದರ ಪ್ರಕಾರ, ಅನಂತ ಆರ್ಟ ಕಂಪನಿಯ ಸಿಬ್ಬಂದಿ ಭಾರತ್ ಗ್ಯಾಸ್ ಸಿಲೆಂಡರ್ ಹಾಗೂ ಬಾಯ್ಲರ್ ಬಳಕೆ ಮಾಡಿ ರಸ್ತೆಗೆ ಬಿಳಿ ಬಣ್ಣದ ಪಟ್ಟಿ ಬಡಿಯುತ್ತಿದ್ದಾರೆ. ಈ ವೇಳೆ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಸಿಲೆಂಡರ್ ಸ್ಪೋಟಿಸಿದೆ. ಅದೇ ವೇಳೆ ಬಾಯ್ಲರ್ ಬಳಿ ಬೆಂಕಿ ತಾಗಿದ್ದು, ಬಿಸಿಯ ತೀವೃತೆಗೆ ಬಾಯ್ಲರ್ ಸ್ಪೋಟವಾಗಿದೆ.
ಲಾರಿಯೊಂದರಲ್ಲಿ ಬಾಯ್ಲರ್ ನಿಲ್ಲಿಸಲಾಗಿದ್ದು, ಸ್ಪೋಟದಿಂದ ಬಾಯ್ಲರ್ ಜೊತೆ ಲಾರಿಗೂ ಅಲ್ಲಲ್ಲಿ ಹಾನಿಯಾಗಿದೆ. ಅಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.