ಶಿರಸಿ ನಗರದ ಯಲ್ಲಾಪುರ ಮಹಾಸತಿ ವೃತ್ತದ ಬಳಿಯ ಶ್ರೀ ಕೊಪ್ಪರಗೆ ಕೆಂಡ ಮಹಾಸತಿ ದೇವಸ್ಥಾನದಲ್ಲಿ ಹೊಸದಾಗಿ ಕಂಪ್ಯೂಟರ್ ಆಧಾರಿತ ಸೇವಾ ಕೌಂಟರ್ ಶುರುವಾಗಿದೆ.
ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ವಸಂತ ಶೆಟ್ಟಿ ಅವರು ಈ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಸಂಘದ ಪರವಾಗಿ ಅವರು ದೇವಸ್ಥಾನಕ್ಕೆ ಪ್ರಿಂಟರ್ ಹಾಗೂ ಮೋನಿಟರ್ ಕೊಡುಗೆ ನೀಡಿದ್ದಾರೆ.
ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಸ್ಥಾಪಕರಾಗಿದ್ದ ವಸಂತ ಶೆಟ್ಟಿ ಅವರು ತಮ್ಮ ಜೀವಿತ ಅವಧಿಯಲ್ಲಿ ನಡೆಸಿದ ಧಾರ್ಮಿಕ ಹಾಗೂ ಸಾಮಾಜಿಕ ಕಾಳಜಿಯನ್ನು ದೇವಸ್ಥಾನದ ಅಧ್ಯಕ್ಷ ಆಯ್ ಎಮ್ ಹೆಗಡೆ ಅವರು ಸ್ಮರಿಸಿದರು. ದೇಗುಲಕ್ಕೆ ಕೊಡುಗೆ ನೀಡಿದ ವಿನಾಯಕ ಶೆಟ್ಟಿ ಅವರನ್ನು ಆಡಳಿತ ಮಂಡಳಿಯವರು ಸನ್ಮಾನಿಸಿದರು.
`ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದ್ದರಿಂದ ಕೃತಜ್ಞನಾಗಿರುವೆ’ ಎಂದು ವಿನಾಯಕ ಶೆಟ್ಟಿ ಅವರು ಹೇಳಿದರು. ಆಡಳಿತ ಮಂಡಳಿ ಸದಸ್ಯರು, ಭಕ್ತರು ಹಾಗೂ ಕೆಂಡ ಮಹಾಸತಿ ಯುವಕ ಮಂಡಳಿಯ ಸದಸ್ಯರು ಈ ವೇಳೆ ಹಾಜರಿದ್ದರು.