ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರ ರಕ್ಷಣೆಗಿದ್ದ ಬಂದೂಕು ಕಳ್ಳತನವಾಗಿದೆ. ವಿ ಎಸ್ ಪಾಟೀಲ್ ಅವರ ಮನೆಗೆ ನುಗ್ಗಿ ಕಳ್ಳರು ಬಂದೂಕು ಕದ್ದಿದ್ದಾರೆ.
Advertisement. Scroll to continue reading.
ಯಲ್ಲಾಪುರ ವಿಧಾನಸಭಾ ಕ್ಷೇತ್ರ ರಚನೆ ಆದಾಗ ವಿ ಎಸ್ ಪಾಟೀಲ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿಯೇ ಅವರು ಜಯಬೀರಿ ಬಾರಿಸಿದ್ದರು. ಆ ಅವಧಿಯಲ್ಲಿಯೇ ಅವರು ತಮ್ಮ ರಕ್ಷಣೆಗಾಗಿ ಬಂದೂಕು ಪರವಾನಿಗೆ ಹೊಂದಿದ್ದರು. ಡಬಲ್ ಬ್ಯಾರಲ್ ಬಂದೂಕನ್ನು ಸಹ ವಿ ಎಸ್ ಪಾಟೀಲ್ ಅವರು ಖರೀದಿಸಿದ್ದರು. ಅದೇ ಬಂದೂಕು ಇದೀಗ ಕಳ್ಳತನವಾಗಿದೆ.
ಮಾಜಿ ಶಾಸಕ ವಿ ಎಸ್ ಪಾಟೀಲ ಅವರು ಮುಂಡಗೋಡಿನ ಅಂದಲಗಿಯಲ್ಲಿ ಅವರಿಗೆ 9 ಎಕರೆ ಕೃಷಿಭೂಮಿಹೊಂದಿದ್ದಾರೆ. ಅಲ್ಲಿಯೇ ಅವರು ವಾಸವಾಗಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿರುವ ಅವರು ರಾಜಕಾರಣದ ಜೊತೆ ಕೃಷಿ ಕಾಯಕದಲ್ಲಿಯೂ ಸಕ್ರೀಯರಾಗಿದ್ದಾರೆ. ಹೀಗಿರುವಾಗ ಅವರು ತಮ್ಮ ಸ್ವ ರಕ್ಷಣೆಗಾಗಿ ಹೊಂದಿದ್ದ ಬಂದೂಕನ್ನು ಕಳೆದುಕೊಂಡಿದ್ದಾರೆ.
ವಿ ಎಸ್ ಪಾಟೀಲ್ ಅವರು ತಮ್ಮ ಜಮೀನಿನಲ್ಲಿರುವ ಬೋರಿನ ಮನೆಯಲ್ಲಿ ಬಂದೂಕು ಇಡುತ್ತಿದ್ದರು. 2025ರ ಡಿಸೆಂಬರ್ 31ರ ಸಂಜೆ ಅವರು ಕೊನೆಯದಾಗಿ ಬಂದೂಕು ಬಳಸಿದ್ದರು. ಜನವರಿ 1ರ ಬೆಳಗ್ಗೆ 10 ಗಂಟೆ ಅವಧಿಗೆ ಬೋರಿನ ಮನೆ ಕಡೆ ಹೋದಾಗ ಅಲ್ಲಿ ಬಂದೂಕು ಕಾಣಲಿಲ್ಲ. 40 ಸಾವಿರ ರೂ ಮೌಲ್ಯದ ಡಬಲ್ ಬ್ಯಾರೆಲ್ ಬಂದೂಕು ಕಾಣದ ಕಾರಣ ಅವರು ಆತಂಕಕ್ಕೆ ಒಳಗಾದರು. ಕುಟುಂಬದವರು ಹಾಗೂ ಸಂಬoಧಿಕರ ಬಳಿಯೂ ಚರ್ಚಿಸಿದರು. ಆದರೆ, ಯಾರೂ ಅವರ ಬಂದೂಕಿನ ಬಗ್ಗೆ ಸುಳಿವು ಕೊಡಲಿಲ್ಲ.
ಕಳೆದು ಹೋದ ಬಂದೂಕನ್ನು 15 ದಿನಗಳ ಕಾಲ ವಿ ಎಸ್ ಪಾಟೀಲ ಅವರು ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಆ ಬಂದೂಕು ಸಿಕ್ಕಿಲ್ಲ. ಅದನ್ನು ಕದ್ದ ಕಳ್ಳನ ಬಗ್ಗೆಯೂ ಗೊತ್ತಾಗಲಿಲ್ಲ. ಈ ಎಲ್ಲಾ ಹಿನ್ನಲೆ ವಿ ಎಸ್ ಪಾಟೀಲ ಅವರು ಮುಂಡಗೋಡು ಪೊಲೀಸ್ ಠಾಣೆಗೆ ಆಗಮಿಸಿದ್ದು, ಸ್ವ ರಕ್ಷಣೆಗಾಗಿಪಡೆದಿದ್ದ ಬಂದೂಕು ಕಳ್ಳತನದ ಬಗ್ಗೆ ಪೊಲೀಸರಿಗೆ ದೂರಿದರು. ಸದ್ಯ ಮುಂಡಗೋಡು ಪೊಲೀಸರು ಆ ಬಂದೂಕಿನ ಹುಡುಕಾಟ ನಡೆಸಿದ್ದಾರೆ.