ಅಡಿಕೆ ತೋಟದಲ್ಲಿರುವ ಕಾಲುವೆ ವಿಷಯವಾಗಿ ಶಿರಸಿಯ ತಿರುಮಲೇಶ್ವರ ಹೆಗಡೆ ಹಾಗೂ ರಘುಪತಿ ಭಟ್ಟ ಅವರ ನಡುವೆ ಹೊಡೆದಾಟ ನಡೆದಿದೆ.
ಶಿರಸಿಯ ಇಸಳೂರು ಬಳಿಯ ಬೋಪನಳ್ಳಿಯಲ್ಲಿ ತಿರುಮಲೇಶ್ವರ ಸತ್ಯನಾರಾಯಣ ಹೆಗಡೆ ಅವರು ವಾಸವಾಗಿದ್ದಾರೆ. ಅವರಿಗೆ ಅಲ್ಲಿ 2.10 ಎಕರೆ ಕ್ಷೇತ್ರದ ಭೂಮಿಯಿದ್ದು, ಅಲ್ಲಿ ಅವರು ಅಡಿಕೆ ಬೆಳೆದಿದ್ದಾರೆ. ಅವರ ತೋಟದ ಪಕ್ಕ ಬೋಪ್ಪನಳ್ಳಿ ಜಂಬೆಕೊಪ್ಪದ ರಘುಪತಿ ಗೋಪಾಲ ಭಟ್ಟ ಅವರ ತೋಟವಿದೆ. ಈ ಎರಡು ತೋಟಗಳ ನಡುವೆ ಮಳೆಗಾಲದಲ್ಲಿ ನೀರು ಹರಿಯುವ ಕಾಲುವೆಯಿದೆ.
Advertisement. Scroll to continue reading.
ರಘುಪತಿ ಭಟ್ಟ ಅವರು ಆ ಕಾಲುವೆ ನೀರನ್ನು ಬೇರೆ ಕಡೆ ತಿರುಗಿಸಿದ್ದಾರೆ. ಕಾಲುವೆ ಮೂಲಕ ಹರಿಯುವ ನೀರನ್ನು ರಘುಪತಿ ಭಟ್ಟ ಅವರು ತಿರುಮಲೇಶ್ವರ ಅವರ ತೋಟದ ಕಡೆ ಬಿಟ್ಟಿದ್ದು ಅವರಿಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಕಾಲುವೆ ನೀರು ತೋಟಕ್ಕೆ ನುಗ್ಗಿದ ಕಾರಣ ತಿರುಮಲೇಶ್ವರ ಅವರ ಅಡಿಕೆ ಫಸಲಿಗೆ ಹಾನಿಯಾಗಿದೆ. ಆ ಹಾನಿ ತಪ್ಪಿಸುವುದಕ್ಕಾಗಿ ಅವರು ನೀರಿನಿಂದ ಹೊಂಡ ಬಿದ್ದ ಪ್ರದೇಶಕ್ಕೆ ಮಣ್ಣು ತುಂಬಿಸುವ ಕೆಲಸ ಮಾಡಿದ್ದಾರೆ.
Advertisement. Scroll to continue reading.
Advertisement. Scroll to continue reading.
ಆದರೆ, ಇದನ್ನು ಸಹಿಸದ ರಘುಪತಿ ಭಟ್ಟರು ಜನವರಿ 1ರ ಸಂಜೆ ಅಲ್ಲಿಗೆ ಬಂದು `ಕಾಲುವೆ ಏಕೆ ಮುಚ್ಚುವೆ?’ ಎಂದು ಪ್ರಶ್ನಿಸಿದ್ದಾರೆ. `ತಮ್ಮ ತೋಟಕ್ಕೆ ಹಾನಿ ಆಗುತ್ತಿದೆ’ ಎಂದು ತಿರುಮಲೇಶ್ವರ ಹೆಗಡೆ ಅವರು ಹೇಳಿದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಅದೇ ಹೊಡೆದಾಟದ ಸ್ವರೂಪಪಡೆದಿದೆ. ಈ ವೇಳೆ ರಘುಪತಿ ಭಟ್ಟರು ತಿರುಮಲೇಶ್ವರ ಹೆಗಡೆ ಅವರಿಗೆ ಹೊಡೆದಿದ್ದಾರೆ. ಆ ನೋವು ಸಹಿಸದ ತಿರುಮಲೇಶ್ವರ ಹೆಗಡೆ ಅವರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
`ದ್ವೇಷ ಬೆಳೆಯುವ ಮುನ್ನ ಬಗೆಹರಿಸಿಕೊಳ್ಳುವುದು ಒಳಿತು’