ಕುಮಟಾದ ವಾಸುದೇವ್ ಶಾನಭಾಗ ಅವರ ಮೊಬೈಲ್ ಹ್ಯಾಕ್ ಆಗಿದೆ. ಪರಿಣಾಮ ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ ಹಣ ಕಣ್ಮರೆಯಾಗಿದೆ.
Advertisement. Scroll to continue reading.
ಕುಮಟಾದ ಮೂರುಕಟ್ಟೆಯ ಹಳೆ ಪೋಸ್ಟ್ ಆಫೀಸ್ ಸಮೀಪ ವಾಸುದೇವ ದಾಮೋದರ ಶಾನಭಾಗ ಅವರು ವಾಸವಾಗಿದ್ದಾರೆ. ವ್ಯಾಪಾರ-ವಹೀವಾಟು ನಡೆಸುವ ಅವರು ಯೂನಿಯನ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ಇದನ್ನು ಅರಿತ ವಂಚಕರು ಡಿಸೆಂಬರ್ 19ರಂದು ಅವರಿಗೆ ಫೋನ್ ಮಾಡಿದ್ದಾರೆ.
ಫೋನ್ ಮಾಡಿದವರು ತಮ್ಮನ್ನು ಯುನಿಯನ್ ಬ್ಯಾಂಕ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಅದಾದ ನಂತರ ವಾಸುದೇವ ಶಾನಭಾಗ ಅವರಿಗೆ ಲಿಂಕ್ ಒಂದನ್ನು ಕಳುಹಿಸಿದ್ದು, ಆ ಲಿಂಕ್ ಮೂಲಕವೇ ಅವರ ಮೊಬೈಲ್ ಹ್ಯಾಕ್ ಮಾಡಿದ್ದಾರೆ. ವಾಸುದೇವ ಶಾನಭಾಗ ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ ಹಣವನ್ನು ಆ ಅಪರಿಚಿತರು ಎಗರಿಸಿದ್ದಾರೆ.
ಮೊಬೈಲ್ ಹ್ಯಾಕ್ ಆಗಿದ್ದು ಹೇಗೆ? ಹಣ ಕಾಣೆಯಾಗಿದ್ದು ಹೇಗೆ? ಎಂದು ವಾಸುದೇವ್ ಶಾನಭಾಗ ಅವರಿಗೆ ಗೊತ್ತೇ ಆಗಲಿಲ್ಲ. ಬ್ಯಾಂಕಿನವರಿಗೆ ಹೋಗಿ ಕೇಳಿದರೂ ಅವರು ಹಣ ಮರಳಿಸುವ ಬಗ್ಗೆ ಗ್ಯಾರಂಟಿ ಕೊಡಲಿಲ್ಲ. ಹೀಗಾಗಿ ವಾಸುದೇವ ಶಾನಭಾಗ ಅವರು ಪೊಲೀಸರ ಮೊರೆ ಹೋಗಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.