ಮುಂಡಗೋಡಿನ ಚೇತನ ಕುಡಾಳಕರ್ ಅವರು ಯಲ್ಲಾಪುರದ ಪೂಜಾ ಅವರನ್ನು ಪ್ರೀತಿಸಿದ್ದು, ಪೂಜಾ ಅವರು ಮದುವೆ ನಿರಾಕರಿಸಿದ ಕಾರಣ ಚೇತನ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
Advertisement. Scroll to continue reading.
ಮುಂಡಗೋಡದ ಆನಂದನಗರದಲ್ಲಿ ಚೇತನ ನಾಗರಾಜ ಕುಡಾಳಕರ್ (24) ಅವರು ವಾಸವಾಗಿದ್ದರು. ವಾಹನ ಚಾಲಕರಾಗಿ ಚೇತನ ಕುಡಾಳಕರ್ ಅವರು ಬದುಕು ಕಟ್ಟಿಕೊಂಡಿದ್ದರು. ಚೇತನ ಕುಡಾಳಕರ್ ಅವರು ತಮ್ಮ ಮಾವನ ಮಗಳಾದ ಪೂಜಾ ಅವರನ್ನು ಪ್ರೀತಿಸುತ್ತಿದ್ದರು. ಅಂಬೇಡ್ಕರ ನಗರದಲ್ಲಿರುವ ಪೂಜಾ ಅವರ ಮನೆಗೂ ಅವರು ಆಗಾಗ ಭೇಟಿ ನೀಡುತ್ತಿದ್ದರು.
ಪೂಜಾ ಅವರು ಸಹ ಚೇತನ ಅವರನ್ನು ಪ್ರೀತಿಸಿದ್ದು, ಅವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಅನ್ಯೋನ್ಯವಾಗಿಯೇ ಇದ್ದರು. ಈ ನಡುವೆ ಚೇತನ ಕುಡಾಳಕರ್ ಅವರು ಪೂಜಾ ಅವರಲ್ಲಿ ಮದುವೆ ಪ್ರಸ್ತಾಪ ಮಾಡಿದರು. ಅದನ್ನು ಪೂಜಾ ಅವರು ನಿರಾಕರಿಸಿದ ಕಾರಣ ಜನವರಿ 9ರಂದು ಚೇತನ ಅವರು ಕೀಟನಾಶಕ ಸೇವಿಸಿದರು. ಮಾವನ ಮನೆಗೆ ಬಂದು ಕೀಟನಾಶಕ ಸೇವಿಸಿದ ಚೇತನ್ ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಷ ಸೇವಿಸಿದ ನಂತರವೂ ಐದು ದಿನಗಳ ಕಾಲ ಬದುಕುಳಿದ ಚೇತನ ಕುಡಾಳಕರ್ ಅವರು ಮಂಗಳವಾರ ತಮ್ಮ ಉಸಿರು ನಿಲ್ಲಿಸಿದರು. ಬೆಂಗಳೂರಿನ ಐಫೋನ್ ಕಂಪನಿಯಲ್ಲಿ ಕೆಲಸ ಮಾಡುವ ಕಾವ್ಯ ಕುಡಾಳಕರ್ ಅವರು ಸಹೋದರನ ಸಾವಿನ ಬಗ್ಗೆ ಅರಿತು ಊರಿಗೆ ಬಂದರು. ಪ್ರೀತಿಯಲ್ಲಿ ಆದ ಮೋಸದಿಂದ ಚೇತನ ಕುಡಾಳಕರ್ ಅವರು ಸಾವನಪ್ಪಿದ ಬಗ್ಗೆ ಅವರು ಮಾಹಿತಿ ನೀಡಿದರು.