ಶಿರಸಿ-ಕುಮಟಾ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಸಂಚಾರಕ್ಕೆ ಸಮಸ್ಯೆ ಆಗದ ಹಿನ್ನಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ ನಡೆಸಿದ್ದಾರೆ. `ಶಿರಸಿ ಜಾತ್ರೆ ಹಿನ್ನಲೆ ಬರುವ ಭಕ್ತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಕಾಗೇರಿ ತಾಕೀತು ಮಾಡಿದ್ದಾರೆ.
ಭಾನುವಾರ ಕುಮಟಾ ಆಡಳಿತ ಸೌಧಕ್ಕೆ ಭೇಟಿ ಮಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕ ದಿನಕರ ಶೆಟ್ಟಿ ಅವರಿಗೆ ಫೋನ್ ಮಾಡಿದರು. ಅದಾದ ನಂತರ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಪ್ರಗತಿಯ ವಿವರಪಡೆದರು. `ಕುಮಟಾ ಶಿರಸಿ ರಸ್ತೆಶಿರಸಿ ಭಾಗದಲ್ಲಿ ಬಹುಪಾಲು ಮುಕ್ತಾಯವಾಗಿದೆ. ಕುಮಟಾ ಭಾಗದಲ್ಲಿ ಬಾಕಿಯಿದೆ. ಅದನ್ನು ಕೂಡಲೇ ಮುಗಿಸಬೇಕು’ ಎಂದು ಸೂಚಿಸಿದರು. `ಶಿರಸಿ ಹಾವೇರಿ ರಸ್ತೆ ಒಂದು ಕಡೆಯಲ್ಲಿ 12 ಅಡಿ ತಗ್ಗು ಕಾಣುತ್ತಿದೆ. ಜಾತ್ರೆ ಒಳಗೆ ಅದನ್ನು ಸರಿಪಡಿಸಬೇಕು’ ಎಂದು ತಾಕೀತು ಮಾಡಿದರು.
`ಶಿರಸಿಯಿಂದ ನಾಕೂರು ಕ್ರಾಸಿನವರೆಗೆ 42 ಕಿಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, 35 ಕಿ.ಮೀ ರಸ್ತೆ ಕಾಮಗಾರಿ ಬಾಕಿ ಇದೆ. ಅದರಲ್ಲಿ 22ಕಿಮೀ ಶಿರಸಿ ತಾಲೂಕಿನಲ್ಲಿ ಹಾಗೂ 13ಕಿಮಿ ಹಾವೇರಿಯಲ್ಲಿ ಬಾಕಿ ಇದೆ. ಜಾತ್ರೆ ಪೂರ್ವದಲ್ಲಿ ಇನ್ನೂ 10 ಕಿಮೀ ಕಾಮಗಾರಿ ಪೂರ್ಣಗೊಳ್ಳಲಿದ್ದು, ಉಳಿದ ಭಾಗ ಅಗೆಯದೇ ಈಗ ಅಗೆದಿರುವ ಭಾಗ ಮೊದಲು ಸರಿ ಮಾಡುತ್ತೇವೆ’ ಎಂದು ಗುತ್ತಿಗೆ ಕಂಪನಿಯವರು ಹೇಳಿದರು. `ಈ ರಸ್ತೆ ಕಾಮಗಾರಿಯ ಮಧ್ಯೆ ವಾಹನ ಒಡಾದಿಂದ ಅಗುವ ಧೂಳಿನಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಜಾತ್ರೆಗೆ ಬರುವ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗದAತೆ ತಡೆಯಲು ಆಗಾಗ ನೀರು ಸಿಂಪಡಿಸಬೇಕು’ ಎಂದು ಕಾಗೇರಿ ಸೂಚಿಸಿದರು.` ಕತಗಾಲ ಬಿ ಎಸ್ ಎನ್ ಎಲ್ ಕಚೇರಿ ಹತ್ತಿರ ನಿರ್ಮಿಸಿದ ವಾಲ್ ಅವೈಜ್ಞಾನಿಕವಾಗಿದೆ. ಇದರ ಬದಲು ಸೇತುವೆ ನಿರ್ಮಿಸುವುದು ಉತ್ತಮ’ ಎಂದು ಶಾಸಕ ದಿನಕರ ಶೆಟ್ಟಿ ಸಲಹೆ ನೀಡಿದರು. ಚತುಷ್ಪಥ ಕಾಮಗಾರಿ ನಿಧಾನವಾದ ಬಗ್ಗೆ ಕಾಗೇರಿ ಅಸಮಧಾನವ್ಯಕ್ತಪಡಿಸಿದರು.
`ಹೊನ್ನಾವರ ಶರಾವತಿ ನದಿಯ ಹಳೆ ಸೇತುವೆ ಬಗ್ಗೆ ಇನ್ನೊಮ್ಮೆ ಪರಿಣಿತರ ವರದಿ ಪಡೆದು ಲಘು ವಾಹನ ಓಡಾಟಕ್ಕೆ ಅವಕಾಶ ಕೊಡಬೇಕು’ ಎಂದು ದಿನಕರ ಶೆಟ್ಟಿ ಸೂಚಿಸಿದರು. ÀÄಟಾ ಸಹಾಯಕ ಆಯುಕ್ತ ಪಿ ಶ್ರವಣಕುಮಾರ, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಗೇಡ್-2-ತಹಶೀಲ್ದಾರ್ ಸತೀಶ ಗೌಡ, ಗುತ್ತಿಗೆ ಕಂಪನಿಯ ಮಲ್ಲಿಕಾರ್ಜುನ್, ನಿತೀಶ ಶೆಟ್ಟಿ, ಬಿಜೆಪಿ ಕುಮಟಾ ಮಂಡಲಾಧ್ಯಕ್ಷ ಜಿ ಐ ಹೆಗಡೆ ಇದ್ದರು.