ದಾಂಡೇಲಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ನವಾಜ್ ಅವರು ನದಿಯ ನೀರು ಕುಡಿದು ಸಾವನಪ್ಪಿದ್ದಾರೆ.
ದಾಂಡೇಲಿ ಗಾಂಧೀನಗರದ ನವಾಜ್ ಅವರಿಗೆ ಈಗಿನ್ನೂ 18 ವರ್ಷ. ಅದಾಗಲೇ ಅವರು ಈ ಲೋಕದ ಯಾತ್ರೆ ಮುಗಿಸಿದ್ದಾರೆ. ಗುರುವಾರ ಮಧ್ಯಾಹ್ನ ನವಾಜ್ ಅವರು ಸ್ನೇಹಿತರ ಜೊತೆ ಮೌಳಂಗಿ ಪ್ರದೇಶಕ್ಕೆ ಹೋಗಿದ್ದರು. ನದಿ ಸಂಗಮದಲ್ಲಿ ಅವರು ನೀರಿಗೆ ಇಳಿದಿದ್ದರು. ಅಲ್ಲಿಂದ ಮೇಲೆ ಬರಲು ಸಾಧ್ಯವಾಗದೇ ಅಲ್ಲಿಯೇ ಕೊನೆಯುಸಿರೆಳೆದರು.
ನದಿ ನೀರಿನಲ್ಲಿ ಸ್ನಾನ ಮಾಡುವಾಗ ನೀರಿನ ಹರಿವು ಏರಿಕೆಯಾಗಿದ್ದು, ನವಾಜ್ ಅವರು ನೀರಿನಲ್ಲಿ ಕೊಚ್ಚಿ ಹೋದರು. ಈ ವಿಷಯ ಅರಿತು ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಹ ನೀರಿನ ಆಳದಲ್ಲಿ ಸಾಹಸ ಮಾಡಿದರು. ರಾಪ್ಟಿಂಗ್ ತಂಡದವರು ಸಹ ಕಾರ್ಯಾಚರಣೆಗೆ ಕೈ ಜೋಡಿಸಿದರು.
ಆದರೆ, ಸಂಜೆ ವೇಳೆ ನವಾಜ್ ಅವರು ಶವವಾಗಿ ಸಿಕ್ಕಿದರು. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
`ಅಪಾಯಕಾರಿ ಪ್ರದೇಶಗಳಿಗೆ ಹೋಗಬೇಡಿ’