`ಸ್ಥಳೀಯ ಸಮುದಾಯಗಳ ಬಲವರ್ಧನೆಯಿಂದ ಪಶ್ಚಿಮ ಘಟ್ಟಗಳ ಉಳಿವು ಸಾಧ್ಯ’ ಎಂದು ರೋಟರಿ ಸಂಸ್ಥೆಯ ಅಂತರಾಷ್ಟ್ರೀಯ ನಿರ್ದೇಶಕ ಕೆ ಪಿ ನಾಗೇಶ ಅವರು ಹೇಳಿದ್ದಾರೆ. ಪಶ್ಚಿಮ ಘಟ್ಟಗಳ ಉಳಿವಿಗೆ ಅವಲಂಬಿತ ಸಮುದಾಯಗಳ ಬಲವರ್ಧನೆಗೆ ಯೋಜನೆಯ ಬಗ್ಗೆ ಅವರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ.
ಶಿರಸಿಯ ವಾನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಕ್ಕಳ್ಳಿ ಮತ್ತು ಮುಷ್ಕಿಯಲ್ಲಿ ನಡೆದ `ಮೂರು ಮತ್ತು ನಾಲ್ಕನೇ ಸೋಲಾರ್ ಗ್ರಾಮ’ ಯೋಜನೆ ಉದ್ಘಾಟಿಸಿದ ಅವರು ಸೌರದೀಪಗಳನ್ನು ವಿತರಿಸಿದರು. ಸ್ಕೊಡ್ವೆಸ್ ಸಂಸ್ಥೆ, ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಮತ್ತು ರೋಟರಿ ಬೆಂಗಳೂರು ಗಂಧದಗುಡಿ ವಿಭಾಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದು, `ಜಾಗತಿಕ ಮಟ್ಟದಲ್ಲಿ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸುವ ಮೂಲಕ ರೋಟರಿ ಸಂಸ್ಥೆ ಸೇವೆಗೆ ಪರ್ಯಾಯ ಅರ್ಥ ಕಲ್ಪಿಸಿದೆ’ ಎಂದು ಬಣ್ಣಿಸಿದರು. `ಪಶ್ಚಿಮ ಘಟ್ಟಗಳು ಜಾಗತಿಕ ಮಟ್ಟದ ಮನ್ನಣೆಪಡೆದ ಪ್ರದೇಶಗಳಾಗಿದ್ದು, ಜಾಗತಿಕ ತಾಪಮಾನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಅವಲಂಬಿತ ಸಮುದಾಯಗಳ ಬಲವರ್ಧನೆಗೆ ರೋಟರಿ ಸಂಸ್ಥೆ ಕೈ ಜೋಡಿಸಿದೆ’ ಎಂದವರು ವಿವರಿಸಿದರು.
`ಶಿಕ್ಷಣ, ಆರೋಗ್ಯ, ಕೃಷಿ, ಸ್ವಯಂ ಉದ್ಯೋಗ, ಮಹಿಳೆಯರ ಮತ್ತು ಮಕ್ಕಳ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಸ್ಥಳೀಯವಾಗಿ ಪ್ರತಿಷ್ಠಿತ ಸ್ಕೊಡ್ವೆಸ್ ಸಂಸ್ಥೆ ಸಾಥ್ ನೀಡಿದೆ. ರೋಟರಿ ಸಂಸ್ಥೆ ಅಂತರರಾಷ್ಟಿçÃಯ ಮಟ್ಟದಲ್ಲಿ ಸೇವೆಗಾಗಿಯೇ ಸ್ಥಾಪನೆಯಾದ 1.2ಮಿಲಿಯನ್ಗೂ ಅಧಿಕ ಸದಸ್ಯರನ್ನು ಹೊಂದಿರುವ ಸರಿಸುಮಾರು 121 ವರ್ಷಗಳ ಇತಿಹಾಸ ಇರುವ ಅಂತರರಾಷ್ಟಿçÃಯ ಸಂಸ್ಥೆಯಾಗಿದ್ದು, ಸಮಾಜದ ಎಲ್ಲಾ ವಿಧದ ಸಮಸ್ಯೆಗಳಿಗೂ ಪರಿಹಾರ ಒದಗಿಸುವಲ್ಲಿ ಶ್ರಮಿಸುತ್ತಿದೆ’ ಎಂದು ವಿವರಿಸಿದರು. `ಸ್ಥಳೀಯ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಪರಿಗಣಿಸಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರೋಟರಿ ದೀರ್ಘಾವಧಿ ಪರಿಣಾಮದ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ’ ಎಂದರು. ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಮಾತನಾಡಿ `ಹಲವಾರು ಸಮಸ್ಯೆಗಳಿಗೆ ಉತ್ತರ ಕನ್ನಡ ಜಿಲ್ಲೆ ಇಂದಿಗೂ ಉತ್ತರ ಕಾಣದ ಜಿಲ್ಲೆಯಾಗಿಯೇ ಉಳಿದಿದೆ, ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಸಹ ಅನುಷ್ಠಾನ ಕೊರತೆಯಲ್ಲಿ ನ್ಯೂನತೆಗಳು ಇರುವುದರಿಂದ ರೋಟರಿಯಂತಹ ಸಂಸ್ಥೆಗಳ ಸಹಾಯ ಅತ್ಯಗತ್ಯ’ ಎಂದರು.
ರೋಟರಿ ಬೆಂಗಳೂರು ಹೈಗ್ರೌಂಡ್ಸ್ನ ನಿಕಟಪೂರ್ವ ಅಧ್ಯಕ್ಷ ಸನತ್ ಕುಮಾರ್, ಪ್ರಮುಖರಾದ ಕೆ ಸಿ ಜಯರಾಮ್, ಅಶ್ವಿನ್ ವಿ ಎಸ್, ಸಲಹೆಗಾರರಾದ ಜಯಪ್ರಕಾಶ, ಎಮ್. ಜಯರಾಮು, ದಿನಕರ, ರಾಜಶೇಖರ, ನಟರಾಜ ನಾಯ್ಕ, ಸುವರ್ಣ ಜಯರಾಮು, ಚಂದ್ರಶೇಖರ್ ಕೆ ಎ, ಶುಭಂ, ವಿಜಯರಾಜ್ ಸಿಸೋಡಿಯಾ, ಸುಂದರ್ ರಾಜ್ ಪಾತಿ, ಶ್ರೀಕಾಂತ್ ತಾಕೇಲ್, ಅರುಣ್ ಕುಮಾರ್ ಹಾಗೂ ವಾನಳ್ಳಿ ಪಂಚಾಯತ್ನ ಮಾಜಿ ಉಪಾಧ್ಯಕ್ಷ ಜಯರಾಮ್ ಹೆಗಡೆ ಕಾರ್ಯಕ್ರಮದಲ್ಲಿದ್ದರು. 150ಕ್ಕೂ ಹೆಚ್ಚಿನ ಮನೆಗಳಿಗೆ ಉಚಿತ ಸೌರ ದೀಪಗಳನ್ನು ವಿತರಿಸಲಾಯಿತು. ನಂತರದಲ್ಲಿ ಉಚಿತ ಆಟ-ಪಾಠೋಪಕರಣಗಳನ್ನು ವಿತರಿಸಲಾಯಿತು. ಸ್ಕೊಡ್ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.