800 ವರ್ಷಕ್ಕೂ ಅಧಿಕ ಹಿಂದಿನ ಯಲ್ಲಾಪುರದ ಆನಗೋಡು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವ ನಡೆಸಲು ಆಡಳಿತ ಮಂಡಳಿ ನಿರ್ಣಯಿಸಿದೆ. ಅದರಂತೆ, ಏಪ್ರಿಲ್ 8ರಿಂದ 11ರವರೆಗೆ ಇಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಮಾನಿಗದ್ದೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಏಪ್ರಿಲ್ 4ರಂದು ಕಲಾ ಸಂಕೋಚ ನಡೆಯಲಿದ್ದು, ಏ 8 ಹಾಗೂ 9ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 10ರಂದು ದೇವರ ಪ್ರತಿಷ್ಠೆ, ಶಿಖರ ಪ್ರತಿಷ್ಠೆ ನಡೆಯಲಿದೆ. ಏ 11ರಂದು ವಿವಿಧ ಹವನಗಳು ನಡೆಯಲಿದ್ದು, ಸ್ವರ್ಣವಲ್ಲೀ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ’ ಎಂದವರು ತಿಳಿಸಿದರು.
`ಏಪ್ರಿಲ್ 11ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಶಾಸಕಿ ರೂಪಾಲಿ ನಾಯ್ಕ ಇತರರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎನ್ ಕೆ ಭಟ್ಟ, ಗಣಪತಿ ಭಟ್ಟ, ಸತೀಶ ಯಲ್ಲಾಪುರ, ಗೋಪಾಲಕೃಷ್ಣ ಭಟ್ಟ, ಮಹಾದೇವಿ ಭಟ್ಟ, ಗಿರೀಶ ಭಟ್ಟ ಅಗ್ಗಾಶಿಮನೆ ಅವರನ್ನು ಸನ್ಮಾನಿಸಲಾಗುತ್ತದೆ’ ಎಂದರು. `ಉತ್ಸವದ ಪ್ರಯುಕ್ತ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಏ 8ಕ್ಕೆ ಸಂಗೀತ ಕಾರ್ಯಕ್ರಮ, 9ರಂದು ಭಜನೆ, 10ರಂದು ಸತೀಶ ಯಲ್ಲಾಪುರ, ನೀರ್ನಳ್ಳಿ ಗಣಪತಿ ಅವರ ನೇತೃತ್ವದಲ್ಲಿ ಗಾನ ಕುಂಚ ಕಾರ್ಯಕ್ರಮ ನಡೆಯಲಿದೆ’ ಎಂಬ ಮಾಹಿತಿ ತಿಳಿಸಿದರು.
ಸಮಿತಿ ಕಾರ್ಯದರ್ಶಿ ನರಸಿಂಹ ಗಾಂವ್ಕರ, ಸ್ಥಳೀಯ ಪ್ರಮುಖರಾದ ದಾಮೋದರ ಗಾಂವ್ಕರ, ವಿಶ್ವೇಶ್ವರ ಗಾಂವ್ಕರ, ನಾಗೇಂದ್ರ ಭಟ್ಟ, ಕೆ ಎಸ್ ಭಟ್ಟ, ಸತ್ಯನಾರಾಯಣ ಹೆಗಡೆ, ಶ್ರೀಕಾಂತ ಹೊನ್ನೆಬೈಲ, ಗಣಪತಿ ದೋಣಿಗದ್ದೆ ಇತರರಿದ್ದರು.