ಶಿರಸಿಯ ಮರಾಠಿಕೊಪ್ಪದ ನಿತ್ಯಾನಂದ ಮಂದಿರದಲ್ಲಿ ರಾಮನವಮಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಇಲ್ಲಿ ನಡೆದ ಶ್ರೀ ರಾಮ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆ ಭಕ್ತರು ಭಾಗವಹಿಸಿದ್ದು, ಜಪ-ಉತ್ಸವ-ಅನ್ನ ಸಂತರ್ಪಣೆ ಸೇರಿ ಬಗೆ ಬಗೆಯ ಚಟುವಟಿಕೆಯಲ್ಲಿ ತಮ್ಮನ್ನು ಭಕ್ತಿಭಾವದಿಂದ ತೊಡಗಿಸಿಕೊಂಡಿದ್ದಾರೆ.
ಸoಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಅನೇಕ ಗಣ್ಯರು ರಾಮನವಮಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಮಾರ್ಚ 25ರಿಂದ 28ರವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಅತ್ಯಂತ ಶ್ರದ್ಧಾ ಭಕ್ತಿಯಿಂದ ಭಕ್ತರು ರಾಮ ಮಂತ್ರ ಪಠಿಸಿದ್ದಾರೆ. ರಥೋತ್ಸವದ ಹಿನ್ಮಲೆಯಲ್ಲಿ ಮೊದಲ ದಿವಸ ಅಖಂಡ ಶ್ರೀರಾಮ ತಾರಕ ಜಪ ನಡೆಯಿತು. ಎರಡನೇ ದಿವಸ ಶ್ರೀ ರಾಮನವಮಿ ಉತ್ಸವ ನಡೆದಿದ್ದು, ಅನ್ನ ಸಂತರ್ಪಣೆಸಹಿತ ಧಾರ್ಮಿಕ ಕಾರ್ಯಕ್ರಮ ಜರುಗಿತು. ಕೊನೆಯ ದಿವಸ ಶುಕ್ರವಾರ ರಥೋತ್ಸವ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಕೃತಜ್ಞರಾದರು.
ಕಾರ್ಯಕ್ರಮದ ಅಂಗವಾಗಿ ಸುಂದರವಾದ ರಾಮನ ಮೂರ್ತಿ ನಿರ್ಮಾಣ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ದುಡಿದ ಕಾರ್ಯಕರ್ತರು, ದಾನಿಗಳಿಗೆ ಈ ವೇಳೆ ಗೌರವ ಸಲ್ಲಿಸಲಾಯಿತು. ಮಠದ ಅಧ್ಯಕ್ಷ ವಿಷ್ಣು ಹರಿಕಾಂತ, ಚಂದು ಮಾದನಗೇರಿ, ವಿನಾಯಕ ಶೆಟ್ಟಿ, ಲಿಂಗಪ್ಪ ಕೊಂಡ್ಲಿ, ಶರ್ಮಿಳಾ ಮಾದನಗೇರಿ ಇನ್ನಿತರು ಕಾರ್ಯಕ್ರಮದ ಉಸ್ತುವಾರಿವಹಿಸಿದ್ದು, ಶಿಸ್ತು ಬದ್ಧವಾಗಿ ಸಂಘಟನೆ ಮಾಡಿದ್ದರು.