ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಶೇ 100ರ ಸಾಧನೆ ಮಾಡಿದೆ. ಪರೀಕ್ಷೆ ಎದುರಿಸಿದ 45 ವಿದ್ಯಾರ್ಥಿಗಳು ಉತ್ತಮ ಅಂಕಪಡೆದು ಪಾಸಾಗಿದ್ದಾರೆ.
ಈ ಶಾಲೆಯ ವಿದ್ಯಾರ್ಥಿನಿ ಅಶ್ವಿತಾ ದೇಸಾಯಿ ಶೇ 93 ಅಂಕಗಳನ್ನುಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಾಗರತ್ನಾ ವೇಳಿಪ (92%), ಚೈತಾಲಿ ಮಿರಾಶಿ (89%), ಭೂಮೇಶ ಮಿರಾಶಿ (88%), ರಿದಿಶಾ ಗಾಂವಕರ (87%), ನಮ್ರತಾ ವೇಳಿಪ (86%), ಧೀರಜ ನಾಯ್ಕ (85%), ಗಾಯತ್ರಿ ಅವಲ್ (85%), ಶ್ರದ್ಧಾ ಮಿರಾಶಿ (84%), ಪ್ರಿಯಾ ಬಿರಂಗತ (83%), ಚೈತ್ರಾ ವೇಳಿಪ (83%), ಸುಧರ್ಶನ ದೇಸಾಯಿ (83%), ಸುನೀಲ ಮಿರಾಶಿ (82%), ಸಂಗೀತಾ ಮಿರಾಶಿ (81%)ರ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಅಧ್ಯಕ್ಷರಾದ ಉಮೇಶ ಸಾಳುಂಕೆ, ಕಾರ್ಯದರ್ಶಿಗಳಾದ ಸಂಜಯ ಸಾಳುಂಕೆ, ಉಪಾಧ್ಯಕ್ಷರಾದ ಗಿರೀಶ ದೇಸಾಯಿ, ಹಾಗೂ ಪ್ರೇಮಾಶ್ರಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸೀತಾರಾಮ ಗಾಂವಕರ, ಕಾರ್ಯದರ್ಶಿಗಳಾದ ದಿನೇಶ ಗಾಂವಕರ, ಟ್ರಸ್ಟಿ ಶ್ಯಾಮಕುಮಾರ ದೇಸಾಯಿ ಶಿಕ್ಷಣಪ್ರೇಮಿ ಅನೀಲಕುಮಾರ ಗಾಂವಕರ, ಓ.ಎಸ್.ಜಿ ಗ್ರುಪ್ ಅಧ್ಯಕ್ಷರಾದ ಪವನ ಸಾವಂತ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಟ್ರಸ್ಟ್ (ಕಾರವಾರ)ದ ನರೇಂದ್ರ ದೇಸಾಯಿ, ಕಲ್ಲೂರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಇಬ್ರಾಹಿಂ ಕಲ್ಲೂರು, ಉದ್ಯಮಿಗಳಾದ ದಿನಕರ ಸಾಳುಂಕೆ, ಅಸ್ನೋಟಿ ಶಿಕ್ಷಣ ಸಂಸ್ಥೆಯವರು ಸಂತಸವ್ಯಕ್ತಪಡಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಕ ಗಣೇಶ್ ಬಿಷ್ಣಣ್ಣನವರ ಮತ್ತು ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಾಧಕರಿಗೆ ಶುಭ ಕೋರಿದ್ದಾರೆ.