ಯಲ್ಲಾಪುರ ಬಸ್ ನಿಲ್ದಾಣ ಬಳಿಯ ವೈಭವ ಬಿಲ್ಡಿಂಗ್’ನಲ್ಲಿ ಸಂಗೀತ ಕಚೇರಿಯೊಂದು ಶುರುವಾಗಿದೆ. ರೈಸಿಂಗ್ ಸ್ಟಾರ್ ಮ್ಯೂಸಿಕಲ್ ಅಕಾಡೆಮಿಯೂ ಇಲ್ಲಿ ಶಾಖೆ ತೆರೆದಿದ್ದು, ಸಂಗೀತ ಆಸಕ್ತರಿಗೆ ಪ್ರಾಯೋಗಿಕ ತರಗತಿ ನಡೆಸುತ್ತಿದೆ.
ಟಿವಿ ಆಡಿಶನ್’ನಲ್ಲಿ ಭಾಗವಹಿಸಬೇಕು ಎನ್ನುವವರನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಇಲ್ಲಿ ತರಬೇತಿ ನೀಡಲಾಗುತ್ತದೆ. ಜೊತೆಗೆ ಸಂಗೀತ ಕಲಿಯಲು ಬಯಸುವ ಎಲ್ಲರಿಗೂ ಇಲ್ಲಿ ಮುಕ್ತ ಪ್ರವೇಶವಿದ್ದು, ಅತ್ಯಾಧುನಿಕ ಸಂಗೀತ ಉಪಕರಣಗಳನ್ನು ಅಳವಡಿಸಲಾಗಿದೆ. ಹಿಂದೂಸ್ತಾನಿ ಸಂಗೀತ, ಕೀಬೋರ್ಡ ತರಬೇತಿ, ಕರೋಕೆ ಸೇರಿ ವಿವಿಧ ತರಗತಿಗಳು ಶುರುವಾಗಿದೆ.
ಭಾನುವಾರ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ, ಕೀಬೋರ್ಡ್ ಮತ್ತು ಕರೋಕೆ ತರಗತಿಗಳ ಉದ್ಘಾಟನೆ ನೆರವೇರಿದೆ. ವೈಭವ್ ಬಿಲ್ಡಿಂಗ್ ಮಾಲಕ ಮೋತಿಲಾಲ್ ಕಲಬುರ್ಗಿ ಅವರು ರಿಬನ್ ಕಟ್ ಮಾಡಿ ಈ ತರಗತಿಗಳಿಗೆ ಚಾಲನೆ ನೀಡಿದ್ದು, ಅದಾದ ನಂತರ ದೀಪ ಬೆಳಗಿಸಿ, ಸಂಗೀತ ಉಪಕರಣಗಳಿಗೆ ಪೂಜೆ ಸಲ್ಲಿಸಲಾಗಿದೆ. ಈ ದಿನ ಶಿಕ್ಷಕ ಉಮೇಶ ಗೌಡ ಅವರು ತರಗತಿಗಳನ್ನು ಶುರು ಮಾಡಿದ್ದಾರೆ. ಅವರ ಜೊತೆ ಇನ್ನಿತರ ನುರಿತ ಕಲಾವಿದರು ಆಗಮಿಸಿ ಇಲ್ಲಿ ತರಬೇತಿ ನೀಡಲಿದ್ದು, ಅದಕ್ಕೆ ಎಲ್ಲಾ ಬಗೆಯ ತಯಾರಿಗಳು ನಡೆದಿವೆ.
ಸಂಗೀತ ತರಗತಿಯ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು, ಆಸಕ್ತರು ಇಲ್ಲಿ ಫೋನ್ ಮಾಡಿ: 7975670097 ಅಥವಾ 9480452405