ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಮದುವೆ ದಿಬ್ಬಣ ಪಲ್ಟಿಯಾಗಿದೆ. ಮದುವೆ ಮುಗಿಸಿ ಮನೆಗೆ ಮರಳುತ್ತಿದ್ದವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಯಲ್ಲಾಪುರದ ಅರಬೈಲ್ ಮೂಲದ ಕುಟುಂಬದವರು ಭಾನುವಾರ ಬೆಳಗಾವಿಯಲ್ಲಿ ನಡೆಯುವ ಮದುವೆಗೆ ಹೋಗಲು ನಿರ್ಧರಿಸಿದ್ದರು. ಇದಕ್ಕಾಗಿ ಸ್ಥಳೀಯ ಟೆಂಪೋವನ್ನು ಬಾಡಿಗೆಗೆಪಡೆದಿದ್ದರು. ಮದುವೆ ಮುಗಿಸಿ ಮನೆಗೆ ಮರಳುವಾಗ ಅರಬೈಲ್ ಘಟ್ಟದಲ್ಲಿ ಅವರಿದ್ದ ಟೆಂಪೋ ಅಪಘಾತಕ್ಕಿಡಾಯಿತು. ಮದುವೆ ಮುಗಿಸಿ ಮನೆಗೆ ಮರಳುತ್ತಿದ್ದ 10ಕ್ಕೂ ಅಧಿಕ ಜನ ಅಪಘಾತದಲ್ಲಿ ಗಾಯಗೊಂಡರು.
ಮನೆಗೆ ತಲುಪಲು 2ಕಿಮೀ ದೂರದಲ್ಲಿರುವಾಗ ಟೆಂಪೋ ಅಪಘಾತಕ್ಕೀಡಾಗಿದೆ. ಅರಬೈಲ್ ಘಟ್ಟದಲ್ಲಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಕಾರಣ ಅವಘಡ ನಡೆದಿದೆ. ಎದುರಿನಿಂದ ಬಂದ ವಾಹನ ತಪ್ಪಿಸುವ ತರಾತುರಿಯಲ್ಲಿ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಟೆಂಪೋ ಮುಂದಿನ ಭಾಗ ಜಖಂ ಆಗಿದೆ. ಅಪಘಾತದ ಬಗ್ಗೆ ಅರಿತ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷ ರಾಯ್ಕರ್ ಎಂಬಾತರಿಗೆ ಸೇರಿದ ಟೆಂಪೋ ಇದಾಗಿದೆ.