ಕಾರವಾರದ ಅಮದಳ್ಳಿ ಹಾಗೂ ಶಿರಸಿಯ ಬನವಾಸಿಯಲ್ಲಿ ವಿದ್ಯಾಲಯಹೊಂದಿರುವ ಎಜುಕೇರ್ ವಸತಿ ಶಾಲೆಯೂ ಈ ಬಾರಿ 50 ಮಕ್ಕಳಿಗೆ ಉಚಿತ ಊಟ – ವಸತಿ ಕೊಡಲು ನಿರ್ಧರಿಸಿದೆ.
ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಉಚಿತ ಊಟ-ವಸತಿ ಜೊತೆ ಉಚಿತ ಶಿಕ್ಷಣ ಹಾಗೂ ಆಂಗ್ಲ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಊಟ- ವಸತಿ ಕೊಡುವುದಾಗಿ ಶಿಕ್ಷಣ ಸಂಸ್ಥೆ ಘೋಷಿಸಿದೆ. ಉಚಿತ ವಸತಿ ಜೊತೆ ಮೂರು ಹೊತ್ತಿನ ಊಟದ ಹೊಣೆಯನ್ನು ಸಹ ಈ ಸಂಸ್ಥೆಯೇವಹಿಸಿಕೊoಡಿದೆ. 6ರಿAದ 10ನೇ ತರಗತಿ ಓದುವ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ವಿವಿಧ ದಾನಿಗಳು ಇದಕ್ಕೆ ಕೈ ಜೋಡಿಸಿದ್ದು, ಎಲ್ಲರ ಸಹಕಾರದಿಂದ 50 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸಹಕಾರ ನೀಡಲು ನಿರ್ಧರಿಸಲಾಗಿದೆ.
ಉಚಿತ ಊಟ, ವಸತಿ, ಶಿಕ್ಷಣದ ಜೊತೆ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಇನ್ನೂ ಅನೇಕ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತದೆ. ಮುಖ್ಯವಾಗಿ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲಕರ ವಾತಾವರಣ ಹಾಗೂ ತರಗತಿಗಳನ್ನು ಇಲ್ಲಿ ನಡೆಸಲಾಗುತ್ತದೆ. ಪ್ರತಿ ದಿನ ಯೋಗ, ಪ್ರಾರ್ಥನೆಯಿಂದ ದಿನ ಶುರುವಾಗಲಿದೆ. ಸಂಸ್ಕಾರಯುತ ಶಿಕ್ಷಣದ ಜೊತೆ ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಮೃದು ಸ್ವಭಾವದ ಶಿಕ್ಷಕರನ್ನು ಸಹ ಈಗಾಗಲೇ ನಿಯೋಜಿಸಲಾಗಿದೆ. ಈ ವರ್ಷ 50 ಮಕ್ಕಳ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಅಧಿಕ ಮಕ್ಕಳಿಗೆ ಇಲ್ಲಿ ಅನುಕೂಲ ಮಾಡಿಕೊಡುವ ವಿಚಾರವಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಫೋನ್ ಮಾಡಿ: 9845250328