ಶಿರಸಿ-ಹಾವೇರಿ ಹೆದ್ದಾರಿ ಅಭಿವೃದ್ಧಿ ಗುತ್ತಿಗೆ ಕೆಲಸ ಪಡೆದಿದ್ದ ಗುತ್ತಿಗೆದಾರ ಈ ದಿನ ಜನರ ಬಳಿ ಸಿಕ್ಕಿಬಿದ್ದಿದ್ದು, ನೂರಾರು ಜನ ಅವರನ್ನು ಸುತ್ತುವರೆದು `ಬೋಳಿ ಮಗ.. ಬೋಸುಡಿ ಮಗ.. ಹುಚ್ಚು ಮಗ’ ಎಂದು ಬೈದಿದ್ದಾರೆ. ಕನ್ನಡ ಬಾರದ ಆ ಗುತ್ತಿಗೆದಾರ ಜನರ ಬೈಗುಳಕ್ಕೆ ಬೆದರಿ ಬೋಳು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ!
ಶಿರಸಿ-ಹಾವೇರಿ ರಾಷ್ಟಿಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನ ನಿರಂತರವಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆ ಹೆದ್ದಾರಿ ಸಂಚಾರ ಬಂದ್ ಮಾಡಿ ಬೀದಿಗಿಳಿದರೂ ಗುತ್ತಿಗೆದಾರ ಮಾತ್ರ ಕೆಲಸಕ್ಕೆ ವೇಗ ನೀಡಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನಲೆ `ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ’ ಎಂಬ ಕಟೌಟ್ ನಿಲ್ಲಿಸಿ ಜನ ಆಕ್ರೋಶವ್ಯಕ್ತಪಡಿಸಿದರೂ ಅದರಿಂದ ಪ್ರಯೋಜನವಾಗಿಲ್ಲ.
ಈ ಎಲ್ಲದರ ನಡುವೆ ಮಂಗಳವಾರ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಜನರ ಕಣ್ಣಿಗೆ ಬಿದ್ದಿದ್ದಾರೆ. ಚಿಪಗಿ ಬಳಿ ಆ ಗುತ್ತಿಗೆದಾರರನ್ನು ಸುತ್ತುವರೆದ ಸಾರ್ವಜನಿಕರು ಹಿಗ್ಗಾಮುಗ್ಗ ನಿಂದಿಸಿದ್ದಾರೆ. ಹಗ್ಗ ತೆಗೆದುಕೊಂಡು ಬಂದ ಜನ ಗುತ್ತಿಗೆದಾರರನ್ನು ಮರಕ್ಕೆ ಕಟ್ಟಿ ಹಾಕಿ ಪ್ರತಿಭಟಿಸಲು ನಿರ್ಧರಿಸಿದ್ದು, ಹಿರಿಯರ ಸಮಕ್ಷೇಮದಿಂದಾಗಿ ಈ ವೇಳೆ ಗುತ್ತಿಗೆದಾರ ತಪ್ಪಿಸಿಕೊಂಡಿದ್ದಾರೆ. `ರಸ್ತೆಯಿಂದ ಮೇಲ್ಬಾಗ ಕಾಲುವೆ ಮಾಡಿದ್ದಾರೆ. ಕಾಲುವೆಯಲ್ಲಿ ನೀರು ನಿಂತು ಸೊಳ್ಳೆ ಕಾಟ ಶುರುವಾದರೂ ಕ್ರಮ ಜರುಗಿಸಿಲ್ಲ. ಮಣ್ಣು-ಧೂಳಿನ ಸಮಸ್ಯೆ ಬಗೆಹರಿಸಿಲ್ಲ’ ಎಂದು ಜನ ಜಾಡಿಸಿದ್ದಾರೆ. ಈ ವೇಳೆ ಎದುರು ಮಾತನಾಡಿದ ಗುತ್ತಿಗೆದಾರನನ್ನು `ಎರಡು ದಿನ ಇಲ್ಲಿಯೇ ಕಟ್ಟಿ ಹಾಕೋಣ’ ಎಂದು ಜನ ದಬಾಯಿಸಿದ್ದಾರೆ.
`ರಸ್ತೆ ಅಭಿವೃದ್ಧಿಗೆ ದುಡ್ಡಿಲ್ಲ ಎಂದರೆ ಬೇಡಿ ಕೊಡುತ್ತೇವೆ, ಮೊದಲು ರಸ್ತೆ ಸರಿ ಮಾಡಿ’ ಎಂದು ಜನ ಒತ್ತಾಯಿಸಿದ್ದಾರೆ. ಈ ವೇಲೆ ಪೊಲೀಸರೊಬ್ಬರು ಗುತ್ತಿಗೆದಾರರನ್ನು `ಸರ್’ ಎಂದು ಸಂಬೋಧಿಸಿದ್ದು, `ಆತನಿಗೆ ಸರ್ ಎಂದು ಕರೆಯಬೇಡಿ’ ಎಂದು ಜನ ಮನವಿ ಮಾಡಿದ್ದಾರೆ. `8ಕಿಮೀ ರಸ್ತೆಯನ್ನು ಸರಿಯಾಗಿ ಮಾಡಲಾಗದ ನಿಮಗೆ ಮಾನ ಮರ್ಯಾದಿ ಇಲ್ಲವೇ? ಎಂದು ಜನ ಗುತ್ತಿಗೆದಾರರನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. `ಬಿಸಿಲಕೊಪ್ಪದಲ್ಲಿ ಪ್ರತಿಭಟನೆ ನಡೆಸಿದಾಗ ಗುತ್ತಿಗೆದಾರರು 10 ದಿನ ಸಮಯ ಕೇಳಿದ್ದರು. ಆದರೆ, ಆ ಸಮಯದ ಅವಧಿಯಲ್ಲಿ ಕೆಲಸ ಮುಗಿದಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಮುತ್ತಿಗೆ ಹಾಕಿದ್ದು, ಐದು ದಿನದಲ್ಲಿ ಚಿಪಗಿಯಿಂದ ಗೌಡಳ್ಳಿವರೆಗೆ ಅಗೆದು ಹಾಕಿದ ರಸ್ತೆ ಸರಿ ಮಾಡಿಕೊಡುವೆ ಎಂಬ ಆಶ್ವಾಸನೆ ನೀಡಿದ್ದಾರೆ’ ಎಂದು ಅಲ್ಲಿನವರು ಮಾಹಿತಿ ನೀಡಿದರು.
`ಇನ್ನೂ ನಾಲ್ಕು ದಿನ ಕೆಲಸ ಮಾಡುವುದನ್ನು ನೋಡುತ್ತೇವೆ. ಕೆಲಸ ಮಾಡಿಲ್ಲ ಎಂದಾದರೆ ರಸ್ತೆ ಬಂದ್ ಮಾಡಿಸುತ್ತೇವೆ. ಮಹಿಳೆಯರು ಮನೆ ಮನೆಯಿಂದ ಹಿಡಿ ತಂದು ಹಿಡಿಕಟ್ಟು ಚಳುವಳಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು. `ಮಳೆ ಶುರುವಾದ ನಂತರ ಜನರ ಸಂಪರ್ಕ ಕಷ್ಟವಾಗುತ್ತದೆ. ಚಿಪಿಗಿಯಲ್ಲಿ ಗಟಾರೆ ತೆರೆದು ಆರು ತಿಂಗಳಾದರೂ ಸರಿ ಮಾಡಿಲ್ಲ. ಶಾಲೆ ಎದುರು ರಸ್ತೆ ಬಂದ್ ಮಾಡಿ ಐದು ತಿಂಗಳಾದರೂ ದಾರಿ ಬಿಟ್ಟಿಲ್ಲ. ಅದನ್ನು ಬಿಟ್ಟು ಕಾಡಿನಲ್ಲಿ ರಸ್ತೆ ಮಾಡುತ್ತಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.