ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಜಾನುವಾರು ಕಳ್ಳತನ ಹೆಚ್ಚಾಗುತ್ತಿದ್ದು, ಇದಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅವರು ಕಳವಳವ್ಯಕ್ತಪಡಿಸಿದ್ದಾರೆ.
`ಕಳೆದ ಒಂದೇ ವಾರದಲ್ಲಿ ಜಾನುವಾರು ಕಳ್ಳತನದ ಮೂರು ಪ್ರಕರಣ ನಡೆದಿದೆ. ದುಬಾರಿ ಬೆಲೆಯ ಕಾರು-ಜೀಪುಗಳಲ್ಲಿ ಆಗಮಿಸಿ ಜಾನುವಾರು ಕದಿಯುತ್ತಿರುವುದು ಗೊತ್ತಾಗಿದೆ. ಹಿಂಸಾತ್ಮಕ ರೀತಿ ಜಾನುವಾರು ಕದಿಯುವವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದರೂ, ತಪ್ಪಿಸಿಕೊಂಡು ಸಾಗಿದವರ ಲೆಕ್ಕವಿಲ್ಲ. ಪೊಲೀಸರು ನಿದ್ದೆ ಬಿಟ್ಟು ವಾಹನ ತಪಾಸಣೆ ಮಾಡಿದರೂ, ಅವರ ಪ್ರಯತ್ನ ಸಾಲುತ್ತಿಲ್ಲ. ಈ ಹಿನ್ನಲೆ ವಿವಿಧ ಇಲಾಖೆಗಳ ವಿಶೇಷ ತಂಡ ರಚಿಸಿ ತಿಂಗಳ ಅಂತ್ಯದವರೆಗೂ ತಪಾಸಣೆ ನಡೆಯಬೇಕು’ ಎಂದವರು ಆಗ್ರಹಿಸಿದ್ದಾರೆ.
`ಪೊಲೀಸರ ಜೊತೆ ಅರಣ್ಯ, ಪಶುಸಂಗೋಪನೆ ಹಾಗೂ ಸ್ಥಳೀಯರು ತಂಡದಲ್ಲಿರಬೇಕು. ಕೆಲವು ನಿರ್ದಿಷ್ಟ ರಸ್ತೆಗಳಲ್ಲಿ ಜಂಟಿ ನಾಕಾಬಂದಿ ಹಾಕಬೇಕು. ಮಳೆಗಾಲ ಪ್ರಾರಂಭವಾದನAತರ ಬಿಡಾಡಿ ದನಗಳು ರಸ್ತೆಯ ಮೇಲೆ ರಾತ್ರಿ ಕಳೆಯುವುದು ಕಡಿಮೆಯಾಗಲಿದ್ದು, ಆಗ ದನಗಳ್ಳರ ಹಾವಳಿಯೂ ತಗ್ಗಲಿದೆ. ಅಲ್ಲಿಯವರೆಗಾದರೂ ಜಿಲ್ಲಾ ಆಡಳಿತ ಈ ಬಗ್ಗೆ ಗಮನ ಹರಿಸಬೇಕು’ ಎಂದು ರಾಮು ನಾಯ್ಕ ಅವರು ಆಗ್ರಹಿಸಿದ್ದಾರೆ.