ಕುಮಟಾದ ಗೋರೆಯಲ್ಲಿರುವ ಮೇಲಿರುವ ಕೆನರಾ ಕೆನರಾ ಎಕ್ಸ್ ಲೆನ್ಸ್ ಪಿಯು ಕಾಲೇಜು ಆಧುನಿಕ ಶಿಕ್ಷಣದ ಪಠ್ಯ ಕ್ರಮದ ಜೊತೆಗೆ ಭಾರತೀಯ ಪಾರಂಪರಿಕ ಶಿಕ್ಷಣವನ್ನು ನೀಡುತ್ತಿದೆ. ಯೋಗ, ಧ್ಯಾನ , ಸಂಗೀತ, ಕ್ರೀಡೆ ಸೇರಿ ಬಗೆ ಬಗೆಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗಾಗಿ ಈ ಕಾಲೇಜು ಶ್ರಮಿಸುತ್ತಿದೆ.
ನಿಸರ್ಗ ರಮಣೀಯ ಪರಿಸರದಲ್ಲಿ ಈ ಕಾಲೇಜು ಕಟ್ಟಲಾಗಿದೆ. ಗುರುಕುಲ ಮಾದರಿಯ ಶಿಕ್ಷಣ ಇಲ್ಲಿದೆ. ಸಮಾಜಮುಖಿ ಚಿಂತಕ, ಖ್ಯಾತ ವೈದ್ಯ ಜಿ ಜಿ ಹೆಗಡೆ ಅವರು ಈ ಕಾಲೇಜಿನ ರೂವಾರಿ. ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವುದಕ್ಕಾಗಿ ಅವರು ಜಿ ಎನ್ ಹೆಗಡೆ ಟ್ರಸ್ಟ್ ಅಡಿಯಲ್ಲಿ ಕಾಲೇಜು ಸ್ಥಾಪಿಸಿದ್ದಾರೆ. ಈ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಜೊತೆಗೆ ಆಯಾ ಕ್ಷೇತ್ರದಲ್ಲಿ ನುರಿತ ವಿಷಯ ತಜ್ಞರಿಂದ ಜೆಇಇ, ನೀಟ್, ಕೆಸಿಇಟಿ ಸಿಎಸ್‌ಇ ಪೌಂಡೇಷನ್ ತರಬೇತಿಯನ್ನು ನೀಡಲಾಗುತ್ತಿದೆ.
ಸುಸಜ್ಜಿತವಾದ ಕಾಲೇಜ್ ಕಟ್ಟಡ, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಹೈಟೆಕ್ ಗ್ರಂಥಾಲಯ, ಡಿಜಿಟಲ್ ಲರ್ನಿಂಗ್ ಜೂನ್, ಆಡಿಯೋ ವಿಶ್ಯೂಲ್ ಕ್ಲಾಸ್ ರೂಮ್, ಅನುಭವಿ ಉಪನ್ಯಾಸಕ ವೃಂದ, ವಿಶಾಲ ಕ್ರೀಡಾಂಗಣ, ಸುಸಜ್ಜಿತ ಸಭಾಂಗಣ, ಶುದ್ಧ ಸಸ್ಯಹಾರ ಕ್ಯಾಂಟಿನ್, ಬಾಲಕಿ ಮತ್ತು ಬಾಲಕರಿಗಾಗಿ ಪ್ರತ್ಯೇಕ ವಸತಿ ನಿಲಯ, ಪ್ರತ್ಯೇಕ ಮೇಲ್ವಿಚಾರಕರು, ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗಾಗಿ ಸಾರಿಗೆ ವ್ಯವಸ್ಥೆ ಈ ಕಾಲೇಜಿನ ವಿಶೇಷಗಳು. ಈ ಎಲ್ಲಾ ಸೌಲಭ್ಯವನ್ನು ಒಂದೇ ಸೂರಿನ ಅಡಿ ಕಲ್ಪಿಸಲಾಗಿದ್ದು, ಕಾಲೇಜು ಪ್ರಾರಂಭವಾದ ನಾಲ್ಕೇ ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ‍್ಯಾಂಕ್ ಜೊತೆಗೆ ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ.
ಈ ವರ್ಷದ ಜೆಇ ಇ ಮೇನ್ಸ್ -2026ರ ಫಲಿತಾಂಶ ಪ್ರಕಟವಾದಾಗ ಈ ಕಾಲೇಜಿನ ದಿಶಾ ಅಶೋಕ್ ಹೆಗಡೆ ಅವರು ಬಿ ಆರ್ಕಿಟೆಕ್ಚರ್ ವಿಭಾಗದಲ್ಲಿ 99.20 99.20 percentile ಅಂಕಗಳಿಸಿ ರಾಷ್ಟ್ರ ಮಟ್ಟದ GEN-EWSನಲ್ಲಿ 35 ನೇ ಸ್ಥಾನ ಹಾಗೂ CRL 589 ನೇ ಸ್ಥಾನ ಪಡೆದಿದ್ದಾರೆ. ಗುಣೇಶ್ ಶೆಟ್ಟಿ NDA ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ಹೆಮ್ಮೆಯ ಸಂಗತಿ. ಹಲವು ವಿಶೇಷಗಳನ್ನು ಹೊಂದಿದ ಕೆನರಾ ಎಕ್ಸ್ಲೆನ್ಸ್ ಪಿಯು ಕಾಲೇಜಿನಲ್ಲಿ ಈಗಾಗಲೇ 2026-27ನೇ ಸಾಲಿನ ಪ್ರವೇಶ ಆರಂಭವಾಗಿದ್ದು, ಕೆಲವೇ ಸೀಟುಗಳು ಲಭ್ಯವಿದೆ.
ಕಾಲೇಜು ಪ್ರವೇಶಕ್ಕಾಗಿ ಇಲ್ಲಿ ಭೇಟಿ ನೀಡಿ:
ಕೆನರಾ ಎಕ್ಸ್ ಲೆನ್ಸ್ ಪಿಯು ಕಾಲೇಜ್
ಗೋರೆ, ಕುಮಟಾ, ಉತ್ತರ ಕನ್ನಡ
ಇನ್ನೂ ಹೆಚ್ಚಿನ ಮಾಹಿತಿಗೆ ಇಲ್ಲಿ ಫೋನ್ ಮಾಡಿ:
9663119845, 9449477473, 9986580703 ಅಥವಾ 9448206380

#sponsored