ಕಾರವಾರದಲ್ಲಿ ಎಲ್ & ಟಿ ಪ್ರಾಜೆಕ್ಟ್ ಸೀಬರ್ಡ ಅಂತರ ವಿಭಾಗೀಯ ಕ್ರಿಕೆಟ್ ಟೂರ್ನಿ ನಡೆದಿದೆ. ಕಾರ್ಮಿಕರು ಮತ್ತು ಕ್ಲೈಂಟ್ ಪ್ರತಿನಿಧಿಗಳ ಕಲ್ಯಾಣಕ್ಕಾಗಿ ಮಾಲಾದೇವಿ ಮೈದಾನದಲ್ಲಿ ಈ ಕ್ರೀಡಾಕೂಟ ಸಂಘಟಿಸಲಾಗಿದ್ದು, ಅದು ಯಶಸ್ವಿಯಾಗಿದೆ.
ಈ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಿಂದ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮಕ್ಕೆ ಎಲ್ & ಟಿ ಪ್ರಾಜೆಕ್ಟ್ ಡೈರೆಕ್ಟರ್ ಪಿ. ವಿಜಯ್, AECOM ಸಂಸ್ಥೆಯ ರೆಸಿಡೆಂಟ್ ಎಂಜಿನಿಯರ್ ಜೆ ರಾಜದುರೈ, ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಹಿರೇಮಠ ಭದ್ರಯ್ಯ ಹಾಗೂ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಮುಖ್ಯ ಅತಿಥಿಯಾಗಿದ್ದರು. ಪ್ರಾಜೆಕ್ಟ್ ಅಕೌಂಟೆOಟ್ ಸಿ ಎಸ್ ಪ್ರದೀಪ್, ಸೆಫ್ಟಿ ಇನ್‌ಚಾರ್ಜ್ ಕೃಷ್ಣಕಾಂತ್ ನಾಯಕ್ ಮತ್ತು ಐಆರ್ ಇನ್‌ಚಾರ್ಜ್ ಕುಮಾರ್ ಅವರು ಭಾಗವಹಿಸಿದ್ದರು.
ಫೈನಲ್ ಪಂದ್ಯದಲ್ಲಿ ಎಲ್ & ಟಿ MWC-4 ತಂಡ ಮತ್ತು ಎಲ್ & ಟಿ ಸರ್ವಿಸ್ ವಿಭಾಗದ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯಿತು. ಅತ್ಯುತ್ತಮ ಪ್ರದರ್ಶನ ತೋರಿದ ಎಲ್ & ಟಿ ಖSW ತಂಡ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿತು. ಎಲ್ & ಟಿ ಸರ್ವಿಸ್ ವಿಭಾಗ ರನ್ನರ್ ಅಪ್ ಸ್ಥಾನಪಡೆಯಿತು. ವಿಜೇತರಿಗೆ ಮಾಧವ ನಾಯಕ ಅವರು ಬಹುಮಾನ ವಿತರಿಸಿದ್ದು, ರನ್ನರ್ ಅಪ್ ತಂಡಗಳನ್ನು ಸನ್ಮಾನಿಸಿದರು. ಈ ಕಾರ್ಯಕ್ರಮಕ್ಕೆ ಸಿಬ್ಬಂದಿ, ಕ್ಲೈಂಟ್ ಪ್ರತಿನಿಧಿಗಳು ಹಾಗೂ ಕಾರ್ಮಿಕರು ಕುಟುಂಬದವರ ಜೊತೆ ಆಗಮಿಸಿದ್ದರು. ಈ ಟೂರ್ನಿ ಸಂಸ್ಥೆಯ ಒಳಾಂಗಣ ಐಕ್ಯತೆ, ಸ್ನೇಹಭಾವ ಮತ್ತು ಕಲ್ಯಾಣ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಿದೆ.

An inter-departmental cricket tournament was organized by the L&T Project Seabird in Karwar. The sports event was held at Maladevi Ground for the welfare of workers and client representatives, and it was successfully conducted.
A total of six teams from various departments participated in the tournament. The chief guests included L&T Project Director P. Vijay, AECOM Resident Engineer J. Rajadurai, retired Lieutenant Commander Hiremath Bhadrayya, and Janashakti Vedike President Madhav Nayak. Project Accountant C.S. Pradeep, Safety In-charge Krishnakant Nayak, and IR In-charge Kumar were also present.
In the final match, there was an exciting contest between the L&T KSW team and the L&T Service Department team. The L&T KSW team delivered an excellent performance and won the championship title, while the L&T Service Department finished as the runner-up. Prizes were distributed to the winners by Madhav Nayak, who also honored the runner-up team.
Staff members, client representatives, and workers attended the event along with their families. The tournament helped strengthen internal unity, camaraderie, and welfare activities within the organization.