ಹೊಟ್ಟೆನೋವು ಸಹಿಸಲಾಗದ ಕಾರಣ ಕುಮಟಾ ಮೂಲೆಕೇರಿಯ ಸುಕ್ರು ಗೌಡ ಅವರು ವಿಷ ಕುಡಿದಿದ್ದಾರೆ. ಆಗ, ಅವರ ಹೊಟ್ಟೆ ನೋವಿನ ಸಮಸ್ಯೆ ಇನ್ನಷ್ಟು ಉಲ್ಬಣವಗಿದ್ದು ಅದನ್ನು ಸಹಿಸಲಾಗದೇ ಸಾವನಪ್ಪಿದ್ದಾರೆ.
ಕುಮಟಾದ ಮೂಲೆಕೇರಿಯಲ್ಲಿ ಸುಕ್ರು ನಾರಾಯಣ ಗೌಡ (65) ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ಈಚೆಗೆ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅದಕ್ಕೆ ಚಿಕಿತ್ಸೆಪಡೆದಿದ್ದರು. ವಿವಿಧ ವೈದ್ಯರಲ್ಲಿ ತೋರಿಸಿದರೂ ನೋವು ಮಾತ್ರ ಕಡಿಮೆ ಆಗಿರಲಿಲ್ಲ.
ಹೊಟ್ಟೆನೋವಿನ ಕಾರಣದಿಂದ ಸುಕ್ರು ಗೌಡ ಅವರು ಮೇ 30ರ ರಾತ್ರಿಯಿಡಿ ನಿದ್ದೆ ಮಾಡಿರಲಿಲ್ಲ. ನೋವಿನ ನರಳಾಟದಲ್ಲಿ ರಾತ್ರಿ ಕಳೆದ ಅವರು ಮರುದಿನ ದುಡುಕು ನಿರ್ಧಾರಕ್ಕೆ ಮುಂದಾದರು. ಮೇ 31ರಂದು ಗದ್ದೆಗೆ ಬಳಸುವ ಕೀಟ ನಾಶಕ ಸೇವಿಸಿದ ಕಾರಣ ಅವರು ಇನ್ನಷ್ಟು ಸಮಸ್ಯೆ ಅನುಭವಿಸಿದರು. ನರಳಾಡುತ್ತಿದ್ದ ಅವರನ್ನು ಸುಕ್ರ ಗೌಡ ಅವರನ್ನು ಅವರ ಪುತ್ರ ಗುರುರಾಜ ಗೌಡ ಅವರು ಅಂಕೋಲಾ ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿದ್ದರು.
ಈ ವಿಷಯದ ಬಗ್ಗೆ ಗುರುರಾಜ ಗೌಡ ಅವರು ಗೋಕರ್ಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದರು.