ಸಿದ್ದಾಪುರದ ಕಾನಸೂರಿನ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಲ್ಲಿ 10ನೇ ತರಗತಿ ಓದುತ್ತಿದ್ದ ಗೋಕುಲ ಗೌಡ ಅವರು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ್ದಾರೆ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಬಳಿಯ ಹುತಗಾರದಲ್ಲಿ ಕೃಷ್ಣ ಗೌಡ ಅವರು ವಾಸವಾಗಿದ್ದು, ಅವರು ತಮ್ಮ ಪುತ್ರ ಗೋಕುಲ ಗೌಡ ಅವರನ್ನು ಹಾಸ್ಟೇಲಿಗೆ ಹಾಕಿದ್ದರು. 15 ವರ್ಷದ ಗೋಕುಲ ಗೌಡ ಅವರು ಕಾನಸೂರಿನ ಇಂದಿರಾಗಾoಧಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ಎಲ್ಲರ ಜೊತೆ ಅನ್ಯೋನ್ಯವಾಗಿಯೇ ಇದ್ದ ಗೋಕುಲ ಗೌಡ ಅವರು ಮಂಗಳವಾರ ಕೊಂಚ ಮಂಕಾಗಿದ್ದರು. ಸಂಜೆ ಶಾಲಾ ಆವರಣದಲ್ಲಿನ ಬಟ್ಟೆ ಒಣಗಿಸುವ ಕೋಣೆಗೆ ಹೋದ ಅವರು ಅಲ್ಲಿಯೇ ನೇಣಿಗೆ ಶರಣಾದರು.
ಗೋಕುಲ ಗೌಡ ಅವರ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಗೊತ್ತಾಗಲಿಲ್ಲ. ಗೆಳೆಯನನ್ನು ಕಳೆದುಕೊಂಡ ಸಹಪಾಠಿಗಳು ಆತಂಕಕ್ಕೆ ಒಳಗಾಗಿದ್ದು, ಶಿಕ್ಷಕರಿಗೂ ಈ ಸಾವಿನ ಸುದ್ದಿ ಆಘಾತ ಮೂಡಿಸಿದೆ. ಸಾವನಪ್ಪಿದ ವಿದ್ಯಾರ್ಥಿ ಪೋಷಕರು ಶಾಲೆಗೆ ಭೇಟಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವಿಚಾರಣೆ ನಡೆಸಿದ್ದಾರೆ.