ಕುಮಟಾ ಅಂತ್ರವಳ್ಳಿಯ ಎನ್ ಡಿ ಹೆಗಡೆ ಅವರ ತೋಟ ನೋಡಿ ಹುಬ್ಬೇರಿಸಿದ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಅಲ್ಲಿಯೇ ಕೃಷಿ ಕಾರ್ಯಾಗಾರ ಆಯೋಜಿಸಲು ನಿರ್ಧರಿಸಿದ್ದಾರೆ. ಆಸಕ್ತ ಕೃಷಿಕರ ಆದಾಯ ಹೆಚ್ಚಿಸಲು ಅನಂತಮೂರ್ತಿ ಹೆಗಡೆ ಅವರು ಆಸಕ್ತಿವಹಿಸಿದ್ದು, ಎನ್ ಡಿ ಹೆಗಡೆ ಅವರ ಪ್ರಗತಿ ಪರ ಕೃಷಿಯನ್ನು ಇತರರಿಗೂ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹಿನ್ನಲೆ `ವಿಶ್ವಾಸ ಕೇ, ವಿಕಾಸ ಕೇ, ಜನ ಕಲ್ಯಾಣ ಕೇ’ ಎಂಬ ಘೋಷವಾಕ್ಯದ ಅಡಿ ಬಿಜೆಪಿ ವಿವಿಧ ಕಾರ್ಯಕ್ರಮ ಆಯೋಜಿಸಿದೆ. ಅದರ ಅಂಗವಾಗಿ ಅನಂತಮೂರ್ತಿ ಹೆಗಡೆ ಅವರು ನೈಸರ್ಗಿಕ ಕೃಷಿ ಕಾರ್ಯಗಾರ ನಡೆಸುತ್ತಿದ್ದಾರೆ ಸಾವಯುವ ಗೊಬ್ಬರ ಉಪಯೋಗ ಬಳಕೆ ಮಾಡಿ ಉತ್ತಮ ಇಳುವರಿ ಪಡೆಯುವ ಕೃಷಿಕರ ಬಗ್ಗೆ ಅವರು ಎಲ್ಲರಿಗೂ ಪರಿಚಯಿಸಲಿದ್ದು, ಅದೇ ದಾರಿಯಲ್ಲಿ ಸಾಗುವವರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ.
ಜೂನ್ 20ರಂದು ಬೆಳಗ್ಗೆ 10.30ಕ್ಕೆ ಪ್ರಗತಿ ಪರ ಕೃಷಿಕ ಎನ್ ಡಿ ಹೆಗಡೆ ಅವರ ಕುಮಟಾದ ಅಂತ್ರವಳ್ಳಿಯ ಕಡಸಾಲಗದ್ದೆ ತೋಟದಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ಸಾವಯವ ಗೊಬ್ಬರದ ಉಪಯೋಗ ಮತ್ತು ಮಹತ್ವದ ಹಾಗೂ ಮಣ್ಣಿನ ಸಾರ ಹಾಗೂ ಸುಧಾರಣೆಯ ವಿಧಾನಗಳು, ಜೀವಾಮೃತ ಬೀಜಾಮೃತ ಘನಜೀವಾಮೃತ ತಯಾರಿಸುವ ವಿಧಾನಗಳು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯಗಳಿಸುವ ತಂತ್ರಗಳು, ರೋಗ ಮತ್ತು ನಿರ್ವಹಣೆ- ನೈಸರ್ಗಿಕ ವಿಧಾನಗಳು ರೈತರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡಲಾಗುತ್ತದೆ.