ಬೆಳಗಾವಿಯ ಮಹೇಶ ಅಂಗಡಿ ಅವರು ದಾಂಡೇಲಿ-ಕುಳಗಿ ರಸ್ತೆಯಲ್ಲಿ ಬೈಕ್ ಓಡಿಸಿದ್ದು, ಎದುರಿನಿಂದ ಲಾರಿ ಬರುವುದನ್ನು ನೋಡಿ ಬೆದರಿದ್ದಾರೆ. ಆ ಭಯಕ್ಕೆ ಬೈಕಿನಿಂದ ಅವರು ಬಿದ್ದಿದ್ದು, ಬೈಕಿನ ಹಿಂದೆ ಕೂತಿದ್ದ ಹನುಮಂತ ಭೂಮನವರ್ ಅವರ ಸಾವಿಗೆ ಕಾರಣರಾಗಿದ್ದಾರೆ.
ಬೆಳಗಾವಿ ಯರಗಟ್ಟಿಯ ವ್ಯಾಪಾರಿ ಮಹೇಶ ಮಹಾಂತೇಶ ಅಂಗಡಿ ಅವರು ಜೂನ್ 5ರ ಸಂಜೆ ದಾಂಡೇಲಿಗೆ ಬಂದಿದ್ದರು. ಕುಳಗಿ ರಸ್ತೆ ಮೂಲಕ ಅವರು ಬೈಕಿನಲ್ಲಿ ಉಳವಿಗೆ ಹೋಗಲು ನಿರ್ಧರಿಸಿದ್ದು, ಬೆಳಗಾವಿಯ ಹನುಮಂತ (ಮಂಕುಳಿ) ಅಜ್ಜಪ್ಪ ಭೂಮನವರ್ ಅವರ ಜೊತೆ ಸಂಚರಿಸುತ್ತಿದ್ದರು. ಆ ದಿನ ಸಂಜೆ ದಾಂಡೇಲಿಯಿoದ ಕುಳಗಿ ಮಾರ್ಗವಾಗಿ ಉಳವಿಗೆ ಹೋಗುವಾಗ ಎದುರಿನಿಂದ ಬಂದ ಲಾರಿ ಬರುವುದನ್ನು ನೋಡಿ ಮಹೇಶ ಅಂಗಡಿ ಅವರು ಹೆದರಿದರು. ಆ ಲಾರಿ ಗುದ್ದುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಬೈಕಿನ ದಿಕ್ಕನ್ನು ಬೇರೆ ಕಡೆ ತಿರುಗಿಸಿದರು.
ಕುಳಗಿ ಒಣಿಕೇರಿಯಿಂದ ದಾಂಡೇಲಿ ಕಡೆಗೆ ಚಲಾಯಿಸಿದ ಬೈಕು ಸ್ಕಿಡ್ ಆಗಿ ಬಿದ್ದಿತು. ಬೈಕಿನಿಂದ ಬಿದ್ದ ರಭಸಕ್ಕೆ ಮಹೇಶ ಅಂಗಡಿ ಅವರಿಗೆ ಗಾಯವಾಗಿದ್ದು, ಜೊತೆಗಿದ್ದ ಹನುಮಂತ (ಮಂಕುಳಿ) ಅಜ್ಜಪ್ಪ ಭೂಮನವರ್ ಅವರು ಅಲ್ಲಿಯೇ ಸಾವನಪ್ಪಿದರು. ಚಿಕ್ಕಪ್ಪನ ಸಾವಿನ ಬಗ್ಗೆ ಜೊಯಿಡಾ ಅಂಬಿಕಾನಗರ ಬಳಿಯ ಸತ್ತಿಗೇರಿಯ ಉಮೇಶ ಹನುಮಂತ ನಾಯ್ಕರ್ ಅವರು ಮಾಹಿತಿ ನೀಡಿದರು. ಅಂಬಿಕಾನಗರ ಪೊಲೀಸರು ಪ್ರಕರಣ ದಾಖಲಿಸಿದರು.